ಮಾಟ-ಮಂತ್ರಗಳ ಪ್ರಭಾವಕ್ಕೊಳಗಾದ ಬೆಂಗಳೂರಿನ ಬಾಲಕಿ ನಾಪತ್ತೆ

ಬೆಂಗಳೂರು: ಆತ್ಮಗಳ ಜೊತೆ ಮಾತನಾಡುತ್ತೇನೆ ಎಂದು ಬಾಲಕಿಯೊಬ್ಬಳು ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಾಳೆ. ಮಗಳನ್ನು ಪತ್ತೆ ಹಚ್ಚಿಕೊಡುವಂತೆ ಆಕೆಯ ಪೋಷಕರು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ಸುಬ್ರಹ್ಮಣ್ಯನಗರದಲ್ಲಿ ಪೋಷಕರ ಜೊತೆ ವಾಸವಿದ್ದ 17 ವರ್ಷದ ಅನುಷ್ಕಾ ಈ ಅಕ್ಟೋಬರ್‌ 31ರಂದು ಮನೆಯಿಂದ ಕಾಣೆಯಾಗಿದ್ದಳು.

ಅಕ್ಟೋಬರ್ 31ರಂದು ಬೆಳಗ್ಗೆ 8.30ಕ್ಕೆ ಮನೆಬಿಟ್ಟು ಹೋದವಳು ಇದುವರೆಗೆ ಹಿಂತಿರುಗಿಲ್ಲ. ಪೊಲೀಸರು ಇಷ್ಟು ದಿನ ತೀವ್ರ ಹುಡುಕಾಟ ನಡೆಸಿದರೂ ಕೂಡ ಇನ್ನೂ ಆಕೆಯ ಸುಳಿವು ಸಿಕ್ಕಿಲ್ಲ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ದಾಖಲಿಸಿದ್ದು ಸೋಷಿಯಲ್ ಮೀಡಿಯಾ ಮೂಲಕ ಕೂಡ ತಮ್ಮ ಮಗಳನ್ನು ಯಾರಾದರೂ ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾರೆ. ಅದರಿಂದ ಅಸಹಾಯಕರಾಗಿರುವ ಅವರು ತಮ್ಮ ಮಗಳನ್ನು ಹುಡುಕಿಕೊಡುವಂತೆ ಈಗ ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದ ಆಕೆ, ಎರಡು ಜೊತೆ ಬಟ್ಟೆ ಹಾಗೂ 2,500 ರೂ. ತೆಗೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ತನ್ನ ಮಗಖ ವರ್ತನೆಯಲ್ಲಿ ಭಾರೀ ಬದಲಾವಣೆಯಾಗಿತ್ತು. ಮನೆಗೆ ಬಂದ ತಕ್ಷಣ ಕೊಠಡಿ ಸೇರಿಕೊಳ್ಳುತ್ತಿದ್ದಳು. ಏಕಾಂತದಲ್ಲೇ ಇರುತ್ತಿದ್ದಳು. ತಮ್ಮ ಮಗಳು ಮಾಟ-ಮಂತ್ರಿ ಅಭಿಚಾರದ ಪ್ರಭಾವಕ್ಕೆ ಒಳಗಾಗಿದ್ದಳು, ಆತ್ಮದೊಂದಿಗೆ ಮಾತನಾಡುವ ಬಗ್ಗೆ ಹೇಳುತ್ತಿದ್ದಳು. ಇದರಿಂದ ಗಾಬರಿಗೊಂಡು ಆಕೆಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು ಎಂದು ಅನುಷ್ಕಾ ತಂದೆ ಅಭಿಷೇಕ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement