ದೇಶದಲ್ಲಿ ಕೋವಿಡ್ ಸೋಂಕು ನಿನ್ನೆಗಿಂತ 27% ಏರಿಕೆ; 1,270ಕ್ಕೆ ತಲುಪಿದ ಓಮಿಕ್ರಾನ್‌ ಸೋಂಕು

ಭಾರತದ ಸಕ್ರಿಯ ಪ್ರಕರಣಗಳು 91,361ಕ್ಕೆ ಏರಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ, 0.26%ರಷ್ಟಿದೆ.
ಚೇತರಿಕೆ ದರವು ಪ್ರಸ್ತುತ 98.36 ಪ್ರತಿಶತದಲ್ಲಿದೆ.
ಕಳೆದ 24 ಗಂಟೆಗಳಲ್ಲಿ 7,585 ಚೇತರಿಕೆ ವರದಿ.
ಕಳೆದ 88 ದಿನಗಳಲ್ಲಿ ದೈನಂದಿನ ಧನಾತ್ಮಕತೆಯ ದರ (1.34%) ಶೇಕಡಾ 2 ಕ್ಕಿಂತ ಕಡಿಮೆ
ಸಾಪ್ತಾಹಿಕ ಸಕಾರಾತ್ಮಕತೆಯ ದರ (0.89%) ಕಳೆದ 47 ದಿನಗಳು ಶೇಕಡಾ 1 ಕ್ಕಿಂತ ಕಡಿಮೆ

ನವದೆಹಲಿ: ಹೊಸದಾಗಿ ಪತ್ತೆಯಾದ ಓಮಿಕ್ರಾನ್ ಕೋವಿಡ್ ರೂಪಾಂತರದ 1,270 ಪ್ರಕರಣಗಳೊಂದಿಗೆ, ಭಾರತದ ಸಂಖ್ಯೆಯು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳೊಂದಿಗೆ 1000-ಗಡಿಯನ್ನು ದಾಟಿದೆ, ಕಳೆದ 24 ಗಂಟೆಗಳಲ್ಲಿ ಒಟ್ಟು 16,764 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಸದ್ಯಕ್ಕೆ 450 ಓಮಿಕ್ರಾನ್ ಪ್ರಕರಣಗಳಿದ್ದರೆ, ದೆಹಲಿಯಲ್ಲಿ ಒಟ್ಟು 320 ಪ್ರಕರಣಗಳಿವೆ.
ದೇಶದಲ್ಲಿ ಮೂರೇ ದಿನದಲ್ಲಿ ಪ್ರಕರಣಗಳ ಸಂಖ್ಯೆ 2.6 ಪಟ್ಟು ಹೆಚ್ಚಿದೆ. ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟ 52 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಓಮಿಕ್ರಾನ್‌ ಸೋಂಕಿರುವುದನ್ನು ಸರ್ಕಾರ ದೃಢಪಡಿಸಿದೆ. ಆದರೆ ಇದು ಓಮಿಕ್ರಾನ್‌ನಿಂದ ಈತ ಮೃತಪಟ್ಟಿದ್ದಾನೆ ಎಂಬುದನ್ನು ಇನ್ನೂ ದೃಢಪಡಿಸಿಲ್ಲ. ಏಕೆಂದರೆ ಈ ವ್ಯಕ್ತಿ ಗಂಭೀರ ಆರೋಗ್ಯ ಸಮಸ್ಯೆ ಹೊಂದಿದ್ದರು ಹಾಗೂ ತೀವ್ರ ಸಿಹಿಮೂತ್ರದ ಕಾಯಿಲೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ.
ದೇಶದಲ್ಲಿ ಗುರುವಾರ 16,700 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಬುಧವಾರ ದೃಢಪಟ್ಟ ಪ್ರಕರಣಗಳಿಗಿಂತ ಶೇಕಡ 27ರಷ್ಟು ಅಧಿಕ. ಸೋಮವಾರದ ಬಳಿಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2.6 ಪಟ್ಟು ಹೆಚ್ಚಿದೆ. ಗುರುವಾರ ತಡರಾತ್ರಿ ವರೆಗೆ 16695 ಪ್ರಕರಣಗಳು ವರದಿಯಾಗಿದ್ದು, ಇನ್ನೂ ಕೆಲವು ರಾಜ್ಯಗಳ ವರದಿಗಳು ಬಂದಿಲ್ಲ. ಇದು 71 ದಿನಗಳಲ್ಲೇ ಗರಿಷ್ಠ ಸಂಖ್ಯೆಯಾಗಿದ್ದು, ಅಕ್ಟೋಬರ್ 20ರಂದು ದೇಶದಲ್ಲಿ 18,388 ಪ್ರಕರಣಗಳು ವರದಿಯಾಗಿದ್ದವು.
ಕಳೆದ ಸೋಮವಾರ ದೇಶದಲ್ಲಿ ಕೇವಲ 6242 ಪ್ರಕರಣ ದೇಶದಲ್ಲಿ ಪತ್ತೆಯಾಗಿತ್ತು. ಆದರೆ ಕೇವಲ ಮೂರ್ನಾಲ್ಕು ದಿನಗಳಲ್ಲಿ, ದೈನಂದಿನ ಸೋಂಕಿತರ ಸಂಖ್ಯೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರು ಮತ್ತಿತರ ಮೆಟ್ರೊ ನಗರಗಳಲ್ಲಿ ಪ್ರಕರಣ ಗಣನೀಯವಾಗಿ ಹೆಚ್ಚುತ್ತಿದೆ. ಈಶಾನ್ಯ ರಾಜ್ಯಗಳು ಮತ್ತು ಕೇರಳ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

ಮಹಾರಾಷ್ಟ್ರದಲ್ಲಿ ಒಂದೇ ದಿನ ಹೊಸ ಪ್ರಕರಣಗಳ ಪ್ರಮಾಣ ಶೇಕಡ 40ರಷ್ಟು ಹೆಚ್ಚಿದ್ದು, 5368 ಪ್ರಕರಣಗಳು ವರದಿಯಾಗಿವೆ. ಬುಧವಾರ 1089 ಪ್ರಕರಣಗಳು ದಾಖಲಾಗಿದ್ದ ಬಂಗಾಳದಲ್ಲಿ ಗುರುವಾರ 2128 ಪ್ರಕರಗಳು ಪತ್ತೆಯಾಗಿವೆ. ಕೋಲ್ಕತ್ತಾದಲ್ಲಿ ಶೇಕಡ 102ರಷ್ಟು ಏರಿಕೆ ಉಂಟಾಗಿದೆ. ದೆಹಲಿಯಲ್ಲಿ 1313 ಪ್ರಕರಣಗಳು ವರದಿಯಾಗಿವೆ.
2423 ಪ್ರಕರಣಗಳು ಬೆಳಕಿಗೆ ಬಂದಿರುವ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ನೆರೆಯ ತಮಿಳುನಾಡಿನಲ್ಲಿ 890 ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಕರ್ನಾಟಕದಲ್ಲಿ 707 ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಸೆಪ್ಟೆಂಬರ್ 26ರ ಬಳಿಕ ದಾಖಲಾದ ಗರಿಷ್ಠ ಪ್ರಕರಣಗಳಾಗಿವೆ.
ರಾಜಸ್ಥಾನ (ಶೇಕಡ 92ರಷ್ಟು ಹೆಚ್ಚಳ), ಬಿಹಾರ (71%), ಪಂಜಾಬ್ (67%), ಉತ್ತರಪ್ರದೇಶ (64%), ಗೋವಾ (54%), ಮಧ್ಯಪ್ರದೇಶ (50%), ಛತ್ತೀಸ್‌ಗಢ (42%), ಜಾರ್ಖಂಡ್ (40%) ಮತ್ತು ಹರ್ಯಾಣ (38%) ರಾಜ್ಯಗಳಲ್ಲೂ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement