ಅಚ್ಚರಿ ತರುವ ಪ್ರಾಣಿಗಳ ಬುದ್ಧಿವಂತಿಕೆ…ನಲ್ಲಿ ಬಿಟ್ಟುನೀರು ಕುಡಿದು ನಂತರ ನಳ ಬಂದ್‌ ಮಾಡುವ ಮಂಗ-ಹಸು..! ವೀಕ್ಷಿಸಿ

ನೀರು ಜೀವಜಲ ಅದೆಷ್ಟು ಅಮೂಲ್ಯ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಒಂದಷ್ಟು ಸಂದರ್ಭದಲ್ಲಿ ನಾವು ಮನುಷ್ಯರು ನೀರನ್ನು ಪೋಲು ಮಾಡುತ್ತೇವೆ. ನೀರೆಂಬ ಅಮೃತವನ್ನು ಮಿತವಾಗಿ ಬಳಸಬೇಕು ಎಂದು ಗೊತ್ತಿದ್ದರೂ ಒಂದಷ್ಟು ಸಂದರ್ಭದಲ್ಲಿ ನೀರು ಪೋಲಾಗಿ ಹೋಗುತ್ತದೆ. ಹೀಗೆ ನೀರಿನ ಪ್ರಾಮುಖ್ಯತೆ ಗೊತ್ತಿದ್ದೂ ನೀರು ಪೋಲು ಮಾಡುವವರಿಗೆ ಈ ದೃಶ್ಯ ಒಂದು ಪಾಠವಾಗಿದೆ.
ಪ್ರಾಣಿಗಳು ತೋರುವ ಬುದ್ಧಿವಂತಿಕೆ, ಜಾಣತನ ನಮ್ಮನ್ನು ಆಶ್ಚರ್ಯಚಕಿತರಾಗಿಸುತ್ತದೆ. ಜೊತೆಗೆ ನಮಗೆ ಒಂದು ಪಾಠವೂ ಆಗಿರುತ್ತದೆ. ಈಗ ಇಂತಹದ್ದೇ ಇನ್ನೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ನೀರನ್ನು ವ್ಯಯ ಮಾಡದೆ ಬಳಸಬೇಕು ಎಂದು ಮಂಗವೊಂದು ನಮಗೆ ಹೇಳುತ್ತಿರುವಂತೆ ಕಾಣುವ ರೀತಿಯ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಅಂದರೆ ನಮಗೆ ಈ ದೃಶ್ಯ ಒಂದು ಪಾಠದಂತಿದೆ. ಹೀಗಾಗಿಯೇ ಈ ವಿಡಿಯೊ ಗಮನ ಸೆಳೆಯುತ್ತದೆ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಮಂಗ ನಲ್ಲಿಯಲ್ಲಿ ನೀರು ಕುಡಿಯುತ್ತಿರುವ ದೃಶ್ಯದ ಮೂಲಕ 10 ಸೆಕೆಂಡಿನ ಕ್ಲಿಪ್ ಆರಂಭವಾಗುತ್ತದೆ. ಹೀಗೆ ನೀರು ಕುಡಿಯುವ ಕೋತಿ ಬಳಿಕ ಟ್ಯಾಪ್ ತಿರುಗಿಸಿ ನೀರು ಬಂದ್ ಮಾಡಿ ಹೋಗುತ್ತದೆ. ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. `ಪ್ರತಿ ಹನಿಯೂ ಅಮೂಲ್ಯ. ಈ ಕೋತಿ ಅನೇಕ ಮನುಷ್ಯರಿಗಿಂತ ಹೆಚ್ಚು ಜವಾಬ್ದಾರಿಯುತವಾಗಿದೆ’ ಎಂದು ಕ್ಯಾಪ್ಶನ್ ಬರೆದು ಸುಸಂತ ನಂದಾ ಈ ವಿಡಿಯೊ ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!
https://twitter.com/susantananda3/status/1474403031919648776?ref_src=twsrc%5Etfw%7Ctwcamp%5Etweetembed%7Ctwterm%5E1474403031919648776%7Ctwgr%5E%7Ctwcon%5Es1_&ref_url=https%3A%2F%2Fvijaykarnataka.com%2Fviral-adda%2Ftrending%2Famazing-viral-video-of-a-monkey-showing-responsibleness-by-turning-of-a-tap-after-drinking-water-is-teaching-so-lesson-to-us%2Farticleshow%2F88581837.cms

ಇದೇ ಸಂದೇಶ ಸಾರುವ ಇನ್ನೊಂದು ವಿಡಿಯೊ ಸಹ ಗಮನ ಸೆಳೆಯುತ್ತದೆ. ಇದರಲ್ಲಿ ಹಸುವೊಂದು ತಾನೇ ನಲ್ಲಿ ನೀರು ಬಿಟ್ಟುಕೊಂಡು ನೀರು ಕುಡಿಯುತ್ತದೆ. ಜೆಮಿ ಗ್ನುಮಾನ್‌ ಎಂಬ ಹೆಸರಿನಲ್ಲಿ ಹಂಚಿಕೊಳ್ಳಲಾದ ಸುಮಾರು 40 ಸೆಕೆಂಡುಗಳ ಈ ವಿಡಿಯೊದಲ್ಲಿ ಹಸುವು ತನ್ನ ಕೊಂಬಿನಿಂದ ನಳ ತಿರುಗಿಸಿ ನೀರು ಬೀಳುವಂತೆ ಮಾಡುತ್ತದೆ. ನಂತರ ತನಗೆ ಬೇಕಾದಷ್ಟು ನೀರು ಕುಡಿದಾದ ನಂತರ ಪುನಃ  ಕೊಂಬಿನ ಸಹಾಯದಿಂದಲೇ ನಳ ತಿರುಗಿಸಿ ಬಂದ್‌ ಮಾಡುತ್ತದೆ.  ಈ ಎರಡು ವಿಡಿಯೊಗಳಲ್ಲಿ ಕಂಡುಬರುವ ಮೂಕ ಪ್ರಾಣಿಗಳ ತೋರುವ ಪ್ರಜ್ಞೆ ಅನಗತ್ಯವಾಗಿ ನೀರು ಪೋಲು ಮಾಡುವವರಿಗೆ ಒಂದು ಪಾಠದಂತಿದೆ. ಈ ಮೂಕ ಪ್ರಾಣಿಗಳು ತೋರುವ ಪ್ರಜ್ಞೆ ಹಾಗೂ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement