ವಯಸ್ಕರಿಗಿಂತ 2ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಹೆಚ್ಚು ಪರಿಣಾಮಕಾರಿ ಎಂದ ಭಾರತ್ ಬಯೋಟೆಕ್

ಹೈದರಾಬಾದ್: ಕೋವಿಡ್‌ ವಿರೋಧಿ ಕೋವ್ಯಾಕ್ಸಿನ್ ವಯಸ್ಕರಿಗಿಂತ 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಉಂಟುಮಾಡಿ ಪರಿಣಾಮಕಾರಿಯಾಗಿ ಕೋವಿಡ್-19 ವಿರುದ್ಧ ಹೋರಾಡಲು ಶಕ್ತಿ ತುಂಬಿದೆ. ಮತ್ತು ಕೋವ್ಯಾಕ್ಸಿನ್ ತುಂಬಾ ಸುರಕ್ಷಿತ ಎಂದು ಭಾರತ್ ಬಯೋಟೆಕ್ ಹೇಳಿದೆ.
12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಕೆಲದಿನಗಳ ಹಿಂದೆ ಅಮನುತಿ ನೀಡಿದೆ. ಈಗ ವ್ಯಾಕ್ಸಿನ್‌ ಬಗ್ಗೆ ಹೆಚ್ಚು ಮಾಹಿತಿ ಹಂಚಿಕೊಂಡಿರುವ ಕೊವ್ಯಾಕ್ಸಿನ್‌ ಲಸಿಕೆ ಕಂಡುಹಿಡಿದ ಭಾರತ್ ಬಯೋಟೆಕ್, ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಪ್ರಯೋಗ ನಡೆಸಿದಾಗ ಇದು ವಯಸ್ಕರಿಗಿಂತ 1.7 ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಮಕ್ಕಳಲ್ಲಿ ವೃದ್ಧಿಸುತ್ತದೆ ಎಂಬ ಅಂಶ ಕಂಡುಬಂದಿದೆ. ಲಸಿಕೆ ಪರೀಕ್ಷೆ ವೇಳೆ 95-98% ಮಕ್ಕಳಲ್ಲಿ ಮೊದಲ ಡೋಸ್ ಪಡೆದ ಬಳಿಕ ಎರಡನೇ ಡೋಸ್ ವೇಳೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದೆ.

525 ಮಂದಿ ಮಕ್ಕಳಿಗೆ ಲಸಿಕೆ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ 2 ರಿಂದ 6 ವರ್ಷದ 175 ಮಕ್ಕಳು, 6 ರಿಂದ 12 ವರ್ಷದ 175 ಮಕ್ಕಳು ಮತ್ತು 12 ರಿಂದ 18 ವರ್ಷದ 176 ಮಕ್ಕಳಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿರುವ ಭಾರತ್ ಬಯೋಟೆಕ್‍ನ ವ್ಯವಸ್ಥಾಪಕ ನಿದೇರ್ಶಕ ಡಾ.ಕೃಷ್ಣ ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಮಕ್ಕಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಸುರಕ್ಷಿತವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಟ್ರಯಲ್‍ನಿಂದ ತಿಳಿದುಬಂದಿದೆ. ಈ ಮೂಲಕ ಸುರಕ್ಷಿತವಾದ ಕೋವಿಡ್-19 ಲಸಿಕೆ ಮಕ್ಕಳಿಗೆ ನಿರ್ಮಿಸುವ ನಮ್ಮ ಗುರಿ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement