ಕರ್ನಾಟಕದಲ್ಲಿ ಓಮಿಕ್ರಾನ್‌ ಸ್ಫೋಟ: ಇಂದು ಒಂದೇ ದಿನ 23 ಜನರಿಗೆ ದೃಢ..!

ಬೆಂಗಳೂರು: ಇಂದು, ಶುಕ್ರವಾರ ಒಂದೇ ದಿನ ಕರ್ನಾಟಕದ 23 ಮಂದಿಯಲ್ಲಿ ಕೋವಿಡ್‌ ರೂಪಾಂತರ ಓಮಿಕ್ರಾನ್‌ ದೃಢಪಟ್ಟಿದೆ.
ಆರೋಗ್ಯ ಸಚಿವ ಸುಧಾಕರ್‌ ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಅಮೆರಿಕ, ಯುರೋಪ್‌, ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಾಗೂ ದಕ್ಷಿಣ ಆಫ್ರಿಕಾ ದೇಶದಿಂದ ಬಂದ 19 ಮಂದಿ ಸೇರಿದಂತೆ ಒಟ್ಟು 23 ಮಂದಿಯಲ್ಲಿ ಓಮಿಕ್ರಾನ್‌ ಸೋಂಕು ಕಾಣಿಸಿದೆ ಎಂದು ತಿಳಿಸಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ ನಾಲ್ಕು ಮಂದಿಯಲ್ಲಿ ಓಮಿಕ್ರಾನ್‌ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೂಲದ ಅಮೆರಿಕದಿಂದ ಮರಳಿದ 5 ವರ್ಷದ ಬಾಲಕನಲ್ಲಿ ಸಹ ಓಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದೆ. ಜಾನ್ಸನ್ ಅಂಡ್ ಜಾನ್ಸನ್ ವ್ಯಾಕ್ಸಿನ್ ಜೊತೆಗೆ ಬೂಸ್ಟರ್ ಡೋಸ್ ತೆಗೆದುಕೊಂಡಿರುವವರಿಗೆ ಸಹ ಓಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಅಸ್ಟ್ರಾಜೆನಿಕಾ 2 ಡೋಸ್‌, ಫೈಝರ್‌ ಎರಡು ಡೋಸ್ ತೆಗೆದುಕೊಂಡವರಿಗೂ ಸೋಂಕು ತಗುಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 20 ರಿಂದ 50 ವರ್ಷದೊಳಗಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಬಾಧಿತರಾಗುತ್ತಿದ್ದಾರೆ. ವಿದೇಶಗಳಿಂದ ಬರುತ್ತಿರುವ ಪ್ರಯಾಣಿಕರ ಪೈಕಿ ಹೆಚ್ಚಿನ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ಗುರುವಾರದ ವರೆಗೆ ರಾಜ್ಯದಲ್ಲಿ ಒಟ್ಟು 43 ಮಂದಿಯಲ್ಲಿ ಓಮಿಕ್ರಾನ್‌ ಬಂದಿತ್ತು. ಈಗ 23 ಮಂದಿಯಲ್ಲಿ ದೃಢಪಟ್ಟಿದ್ದು ಒಟ್ಟು 66 ಜನರಿಗೆ ಸೋಂಕು ತಗುಲಿದಂತಾಗಿದೆ.

ಭಾರತದಲ್ಲಿ ಇಂತಹ ಮೊದಲ ಎರಡು ಪ್ರಕರಣಗಳು ಡಿಸೆಂಬರ್ 2 ರಂದು ಕರ್ನಾಟಕದಲ್ಲಿ ಪತ್ತೆಯಾಗಿವೆ.
ಇಲ್ಲಿಯವರೆಗೆ, ಭಾರತವು ಹೊಸ ರೂಪಾಂತರದ ಸುಮಾರು 1300 ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಅನೇಕ ರಾಜ್ಯಗಳಲ್ಲಿ ಪ್ರಕರಣಗಳು ಬಹಳ ವೇಗವಾಗಿ ಏರುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 309 ಹೊಸ ಸೋಂಕುಗಳು ವರದಿಯಾಗಿವೆ.
ಮತ್ತು 374 ಜನರು ಚೇತರಿಸಿಕೊಂಡಿದ್ದಾರೆ ಅಥವಾ ವಲಸೆ ಹೋಗಿದ್ದಾರೆ ಎಂದು ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ 450 ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 320, ಕೇರಳ 109 ಮತ್ತು ಗುಜರಾತ್‌ನಲ್ಲಿ 97 ಪ್ರಕರಣಗಳು ವರದಿಯಾಗಿವೆ.
ಸುಮಾರು 64 ದಿನಗಳ ನಂತರ ಕೋವಿಡ್ ಪ್ರಕರಣಗಳ ದೈನಂದಿನ ಏರಿಕೆ 16,000 ಗಡಿ ದಾಟಿದ್ದು, ಭಾರತದ ಒಟ್ಟು ಸಂಖ್ಯೆಯನ್ನು 3,48,38,804 ಕ್ಕೆ ತಲುಪಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 91,361 ಕ್ಕೆ ಏರಿದೆ.

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement