ಸರ್ಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ, ಬಾಡೂಟ; ಮುಖ್ಯಾಧ್ಯಾಪಕರಿಂದ ದೂರು ದಾಖಲು

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್​ನ ಸರ್ಕಾರಿ ಶಾಲೆಯ ಬೀಗ ಮುರಿದು ಅಲ್ಲಿಯೇ ಹೊಸ ವರ್ಷದ ಎಣ್ಣೆ ಪಾರ್ಟಿ ಮಾಡಿದ ಘಟನೆ ವರದಿಯಾಗಿದೆ.
ಆರೋಪಿಗಳು ಶಾಲೆಯ ಬಿಸಿಯೂಟ ಸಾಮಾಗ್ರಿಗಳನ್ನ ಬಳಸಿ ಮೊಟ್ಟೆ, ಮಾಂಸ ಬೇಯಿಸಿ ಪಾರ್ಟಿ ಮಾಡಿದ್ದಾರೆ. ಶಾಲೆಯ ದಾಖಲಾತಿಗಳ ಮೇಲೆ ಮದ್ಯ ಚೆಲ್ಲಿದ್ದಾರೆ, ತಿಂದು-ಕುಡಿದ ವಸ್ತುಗಳನ್ನು ಬೇಕಾಬಿಟ್ಟು ಎಸೆದ್ದಿದ್ದಾರೆ ಎಂದು ಮುಖ್ಯೋಪಾಧ್ಯಾಯರು ಮಾನ್ವಿ ಠಾಣೆಗೆ ದೂರು ನೀಡಿದ್ದಾರೆ ಎಂದು ಟಿವಿ9 ಕನ್ನಡ.ಕಾಮ್‌ ವರದಿ ಮಾಡಿದೆ.

ಶಾಲಾ ಅಡುಗೆ ಕೋಣೆಯಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆ ಬಳಸುವ ಎಣ್ಣೆ ಇನ್ನಿತರ ವಸ್ತುಗಳು ಕಳ್ಳತನವಾಗಿವೆ. ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳು ಕಳ್ಳತನವಾಗಿವೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್​ಗಳು, ಮಾಂಸದ ತುಂಡುಗಳು ಪತ್ತೆಯಾಗಿವೆ. ಇಂದು ಬೆಳಿಗ್ಗೆ ಶಿಕ್ಷಕರು ಶಾಲೆಗೆ ಬಂದಾಗ ಕಿಡಿಗೇಡಿಗಳು ಪಾರ್ಟಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಮಾನ್ವಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement