15-18 ವರ್ಷ ವಯಸ್ಸಿನ ಮಕ್ಕಳ ಕೋವಿಡ್-19 ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಇಂದಿನಿಂದ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ -19 ಲಸಿಕೆಗಳನ್ನು ಜನವರಿ 3 ರಿಂದ ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದು, ಅದಕ್ಕಾಘಿ ಎಲ್ಲೆಡೆ ತಯಾರಿ ನಡೆದಿದೆ.
ಈ ಪ್ರಯೋಜನಗಳನ್ನು ಪಡೆಯಲು, 15-18 ವರ್ಷ ವಯಸ್ಸಿನ ಮಕ್ಕಳು ತಮ್ಮ ಸ್ಲಾಟ್‌ಗಳಿಗಾಗಿ ಜನವರಿ 1 ರಿಂದ (ಇಂದಿನಿಂದ) ಸರ್ಕಾರದ CoWin ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಜನವರಿ 3 ರಿಂದ ಕೋವಾಕ್ಸಿನ್ ಡೋಸ್‌ಗಳನ್ನು ಸ್ವೀಕರಿಸಲು ನೇರವಾಗಿ ಲಸಿಕೆ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ವಾರದ ಆರಂಭದಲ್ಲಿ ಹೇಳಿದೆ.
15-18 ವರ್ಷ ವಯಸ್ಸಿನ ಮಕ್ಕಳಿಗೆ ವಾಕ್-ಇನ್ ಮತ್ತು ಆನ್‌ಲೈನ್ ನೋಂದಣಿ (ಕೋವಿನ್ ಮೂಲಕ) ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡಲಾಗುವುದು” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಹದಿಹರೆಯದ ಮಕ್ಕಳಿಗಾಗಿ ಪ್ರತ್ಯೇಕ ಮೀಸಲಾದ ಕೋವಿಡ್ -19 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರವು ರಾಜ್ಯಗಳಿಗೆ ಸಲಹೆ ನೀಡಿದೆ, ಜೊತೆಗೆ ಪ್ರತ್ಯೇಕ ಲಸಿಕೆ ಸಿಬ್ಬಂದಿ ಮತ್ತು ಎಲ್ಲಾ ಸಿವಿಸಿಗಳಲ್ಲಿ ಪ್ರತ್ಯೇಕ ಸರತಿ ಸಾಲುಗಳನ್ನು ಮಾಡಲು ಸೂಚಿಸಲಾಗಿದೆ.
ಮಂಗಳವಾರ, ಆರೋಗ್ಯ ಸಚಿವಾಲಯವು ಜನವರಿ 3 ರಿಂದ ಲಸಿಕೆಗೆ ಅರ್ಹರಾಗಿರುವ 15-18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಿಡ್ -19 ಲಸಿಕೆ – ಕೋವಾಕ್ಸಿನ್‌ನ ಲಸಿಕೆ ಮಾತ್ರ ನೀಡಲಾಗುವುದು ಎಂದು ತಿಳಿಸಿದೆ.
ಕೋವಾಕ್ಸಿನ್ 12-18 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅಗತ್ಯ ಅನುಮೋದನೆಯನ್ನು ಪಡೆದಿದೆ.
ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಹಾಕುವವರಿಗೆ ತರಬೇತಿ ನೀಡುವಂತೆ ಸಲಹೆ ನೀಡಿದೆ.
ಏತನ್ಮಧ್ಯೆ, ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂಗಳು), ಮುಂಚೂಣಿ ಕೆಲಸಗಾರರು (ಎಫ್‌ಎಲ್‌ಡಬ್ಲ್ಯೂಗಳು) ಮತ್ತು ಸಹ-ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್‌ಗಳನ್ನು ಜನವರಿ 10ರಿಂದ ನೀಡಲಾಗುತ್ತದೆ.
ಕೇಂದ್ರದ ಹೊಸ ಆದೇಶದ ಪ್ರಕಾರ, ಸಹ-ಅಸ್ವಸ್ಥತೆ ಬಗ್ಗೆ ದೃಢೀಕರಿಸಲು ವೈದ್ಯರ ಪ್ರಮಾಣಪತ್ರ / ಪ್ರಿಸ್ಕ್ರಿಪ್ಷನ್ ಕಡ್ಡಾಯವಲ್ಲ. ಹೌಬರ್, ಬೂಸ್ಟರ್ ಶಾಟ್‌ಗಳನ್ನು ತೆಗೆದುಕೊಳ್ಳುವ ಮೊದಲು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಲು ಆರೋಗ್ಯ ಸಚಿವಾಲಯವು 60+ ವ್ಯಕ್ತಿಗಳಿಗೆ ಸಲಹೆ ನೀಡಿದೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement