ಹೊಸ ವರ್ಷದಂದು 9 ಮಹಿಳಾ ನಕ್ಸಲರೂ ಸೇರಿ 44 ನಕ್ಸಲರ ಶರಣಾಗತಿ

ಸುಕ್ಮಾ(ಛತ್ತೀಸ್​ಗಡ): ಹೊಸ ವರ್ಷದ ಮೊದಲ ದಿನವೇ ಸುಕ್ಮಾ ಪೊಲೀಸರ ಮುಂದೆ ಸುಮಾರು 44 ನಕ್ಸಲರು ಶರಣಾಗತರಾಗಿದ್ದಾರೆ. ಇದರಲ್ಲಿ 9 ಮಹಿಳಾ ನಕ್ಸಲರೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಕ್ಸಲ್ ನಿರ್ಮೂಲನಾ ಕಾರ್ಯಕ್ರಮವಾದ ಪೂನಾ ನಾರ್ಕೋಮ್ ಅಭಿಯಾನವನ್ನು ಸುಕ್ಮಾ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಈ ಅಭಿಯಾನದಡಿ ಸುಕ್ಮಾ ಪೊಲೀಸರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ಮುಖ್ಯ ವಾಹಿನಿಗೆ ಬರುವಂತೆ ಮನವೊಲಿಸುತ್ತಿದ್ದಾರೆ.
ಪೂನಾ ನಾರ್ಕೋಮ್ ಎಂದರೆ ಹೊಸ ಮುಂಜಾನೆ, ಹೊಸ ಆರಂಭ ಎಂಬರ್ಥ ಬರುತ್ತದೆ. ನಕ್ಸಲರ ಶರಣಾಗತಿ ಬಗ್ಗೆ ಮಾತನಾಡಿದ ಸುಕ್ಮಾ ಎಸ್ಪಿ ಸುನಿಲ್ ಶರ್ಮಾ ಹೊಸ ವರ್ಷದ ಮೊದಲ ದಿನ ಗ್ರಾಮಸ್ಥರು ಕರಿಗುಂಡಂ ಗ್ರಾಮವನ್ನು ತಲುಪಿ ನಕ್ಸಲರನ್ನು ಪೊಲೀಸ್​ ಶಿಬಿರಕ್ಕೆ ಕರೆತಂದಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ಆಹ್ವಾನಿಸಲಾಗಿದೆ. ಈ ನಕ್ಸಲರು ಚಿಂತಗುಫಾ, ಚಿಂತಲ್ನಾರ್, ಭೆಜ್ಜಿ ಪ್ರದೇಶಗಳಲ್ಲಿ ವಿವಿಧ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. ಶರಣಾದ ಎಲ್ಲಾ ನಕ್ಸಲರಿಗೆ ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿ ನೆರವು ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement