ತಾಯಿ ಅಂತ್ಯಕ್ರಿಯೆಗೂ ಬಾರದ ಪುತ್ರರು: ಪುತ್ರಿಯರಿಂದಲೇ ಅಂತಿಮ ವಿಧಿವಿಧಾನ

ಪುರಿ: ಒಡಿಶಾದ ಪುರಿಯಲ್ಲಿ ತಮ್ಮ ಇಬ್ಬರು ಸಹೋದರರು ಅಂತ್ಯಕ್ರಿಯೆಗೆ ಬಾರದ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರು ತಮ್ಮ ತಾಯಿಯ ಮೃತದೇಹವನ್ನು 4 ಕಿಲೋಮೀಟರ್ ವರೆಗೆ ಸ್ಮಶಾನಕ್ಕೆ ಭುಜದ ಮೇಲೆ ಹೊತ್ತುಕೊಂಡು ಹೋಗಿ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ.
ಗಂಡು ಮಕ್ಕಳು ಪೋಷಕರ ಅಂತ್ಯಕ್ರಿಯೆಯನ್ನು ನೆರವೇರಿಸುವುದು ಹಿಂದೂ ಧರ್ಮದಲ್ಲಿ ಸಮಾನ್ಯವಾಗಿರುವ ಸಂಪ್ರದಾಯ. ತಂದೆ ತಾಯಿಯ ಶವಕ್ಕೆ ಹೆಗಲು ನೀಡಿ ನಂತರ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಆದರೆ ಇಲ್ಲಿ ಕುಟುಂಬದಲ್ಲಿ ತಾಯಿಗೆ ಇಬ್ಬರು ಗಂಡುಮಕ್ಕಳಿದ್ದರೂ ಸಹ ಪುತ್ರಿಯರೇ ತಾಯಿಯ ಶವಕ್ಕೆ ಹೆಗಲು ನೀಡಿದ್ದಾರೆ.
ಇಬ್ಬರು ಗಂಡು ಮಕ್ಕಳು ಮೃತ ತಾಯಿಯ ಶವವನ್ನು ನೋಡಲೂ ಆಗಮಿಸಿರಲಿಲ್ಲ. ಇದರಿಂದ ತಾಯಿಯ ಅಂತಿಮ ವಿಧಿವಿಧಾನಕ್ಕೆ ಯಾವುದೇ ತೊಂದರೆ ಆಗಬಾರದೆಂದು ನಿರ್ಧರಿಸಿದ ನಾಲ್ವರು ಪುತ್ರಿಯರು ಊರವರ ಸಹಾಯದಿಂದ ತಾವೇ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪುರಿಯ ಜಾತಿ ನಾಯಕ್​ ಎಂಬ ಮಹಿಳೆ ನಿಧನ ಹೊಂದಿದ್ದರು. ಮೃತ ಜಾತಿ ನಾಯಕ್​​ಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ತಾಯಿ ಸತ್ತು ಎಷ್ಟು ಹೊತ್ತಾದರೂ ಗಂಡು ಮಕ್ಕಳಿಬ್ಬರು ಬರಲಿಲ್ಲ. ಕಾದು ಸುಸ್ತಾದ ನಾಲ್ವರು ಸಹೋದರಿಯರು ನೆರೆ ಹೊರೆಯವರ ಸಹಾಯದಿಂದ ತಾಯಿಯ ಶವಕ್ಕೆ ಹೆಗಲು ನೀಡಿದ್ದಾರೆ. ನಾಲ್ಕು ಕಿಲೋಮೀಟರ್​ ದೂರದ ವರೆಗೆ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸಹೋದರಿಯರ ಈ ಪ್ರಯತ್ನಕ್ಕೆ ನೆರೆಹೊರೆಯವರು ಸಂಪೂರ್ಣ ಸಹಾಯ ಮಾಡಿದ್ದು ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಟ್ಟಿದ್ದಾರೆ.

ಓದಿರಿ :-   ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಾವಳಿ, ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಭಾರತದ ತಂಡ ಪ್ರಕಟ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ