ಕರ್ನಾಟಕದಲ್ಲಿ ಮಂಗಳವಾರ ಕೊರೊನಾ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ… ಬೆಂಗಳೂರಲ್ಲೇ 2,053 ಸೋಂಕು ದಾಖಲು..!

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕು ಏಉತ್ತಲೇ ಸಾಗಿದ್ದು, ಮಂಗಳವಾರ ದೈನಂದಿನ ಸೋಂಕು ಎರಡೂವರೆ ಸಾವಿರ ಸಮೀಪ ಬಂದು ನಿಂತಿದೆ. ಮಂಗಳವಾರ ರಾಜ್ಯದಲ್ಲಿ ಒಟ್ಟು 2,479 ಪ್ರಕರಣಗಳು ದೃಢಪಟ್ಟಿವೆ ಇದರಲ್ಲಿ ಬೆಂಗಳೂರಿನಲ್ಲೇ ಅತೀ ಹೆಚ್ಚು 2053 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 2.59% ಕ್ಕೆ ಏರಿಕೆಯಾಗಿದೆ. ಆದರೆ ಇಂದು ಯಾವುದೇ ಓಮಿಕ್ರಾನ್ ಪ್ರಕರಣ ಕಂಡು ಬಂದಿಲ್ಲ. ಇಂದು ಒಟ್ಟು 95,391 ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡುವ ಮೂಲಕ ಮಾಹಿತಿದ್ದಾರೆ. ಕೋವಿಡ್ ಸೋಂಕಿನಿಂದ ಇಂದು, ಮಂಗಳವಾರ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ 1,041 ಇದ್ದ ದೈನಂದಿನ ಕೊರೊನಾ ಸೋಂಕು ಇಂದು ಬರೋಬ್ಬರಿ 2,053ಕ್ಕೆ ಏರಿಕೆ ಕಂಡು ಮೂರನೇ ಅಲೆಯ ಆತಂಕ ಹೆಚ್ಚಿಸಿದೆ.
ರಾಜ್ಯದಲ್ಲಿ ಸತತ ಮೂರು ದಿನಗಳಿಂದ 1 ಸಾವಿರಕ್ಕೂ ಹೆಚ್ಚು ಕೊರೊನಾ ದೈನಂದಿನ ಪ್ರಕರಣ ದಾಖಲಾಗಿತ್ತು. ಇಂದು ಭಾರೀ ಏರಿಕೆ ಕಂಡಿದ್ದು, 2,479 ಪ್ರಕರಣಗಳು ದೃಢಪಟ್ಟಿರುವುದು ಸಾಕಷ್ಟು ಆತಂಕ ಮೂಡಿಸಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement