ಚಿಕ್ಕಮಗಳೂರು : 9 ವರ್ಷದವಳಿದ್ದಾಗ ನಾಪತ್ತೆಯಾಗಿದ್ದ ಮಗಳು ಬರೋಬ್ಬರಿ 22 ವರ್ಷಗಳ ಬಳಿಕ ಮತ್ತೆ ತಾಯಿ ಜೊತೆ ಸೇರಿದ ಅಪರೂಪದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ತಮಿಳುನಾಡು ಮೂಲದವರಾದ ಅಂಜಲಿ ಎಂಬುವರು ಮೂರು ವರಷ್ಗಳ ಹುಡುಕಾಟದ ನಂತರ ತಮ್ಮ ತಾಯಿ ಚೈತ್ರಾ ಎಂಬುವರನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 30 ವರ್ಷಗಳ ಹಿಂದೆ ಚೈತ್ರಾ ಅವರು ತಮಿಳುನಾಡಿನಿಂದ ಮೂಡಿಗೆರೆಗೆ ಕೆಲಸ ಅರಸಿ ಬಂದಿದ್ದರು. ಇಲ್ಲಿನ ಕಾಫಿ ಎಸ್ಟೇಟೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಚೈತ್ರಾ 9 ವರ್ಷದವಳಿದ್ದಾಗ ಹೊರ ಹೋದಾಗ ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದಾಗ, ಕೇರಳದ ಮಾವುತರೊಬ್ಬರು ಚಿಕ್ಕಮಗು ಅಂಜಲಿಯನ್ನು ಕಂಡು ವಿಚಾರಿಸಿದ್ದಾರೆ. ಚಿಕ್ಕಮಗುವಾಗಿದ್ದ ಅಂಜಲಿ ತನ್ನ ಮನೆಯ ದಾರಿ ತಪ್ಪಿಸಿಕೊಂಡಿದ್ದಾಗಿ ಹೇಳಿದಾಗ, ಮಾವುತ ಅವಳನ್ನು ಎಲ್ಲಿ ಬಿಡಬೇಕು ಎಂದು ತೋಚದೇ ಅವರ ಜೊತೆಗೇ ಬಾಲಕಿಯನ್ನ ಕರೆದುಕೊಂಡು ಹೋಗಿದ್ದಾರೆ. ಕೇರಳದ ಮಾವುತನ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದ ಅಂಜಲಿಗೆ ಬಳಿಕ ನೆಲ್ಲಮಣಿಯ ಸಾಜಿ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ 3 ವರ್ಷದಿಂದ ಅಂಜಲಿ ಅವರು ತಮ್ಮ ತಾಯಿಗಾಗಿ ಹುಡುಕಾಟ ನಡೆಸಿದ್ದರು. ಇದನ್ನು ಮಂಗಳೂರಿನ ಫಿಶ್ಮೋಣು, ಮುಸ್ತಾಫರ್ ಅವರ ಬಳಿ ಹೇಳಿಕೊಂಡಿದ್ದರು. ಆದರೆ ಸಿಕ್ಕಿರಲಿಲ್ಲ.
ಹಲವು ವರ್ಷಗಳ ಹುಡುಕಾಟದ ಬಳಿಕ ಇದೀಗ ಅಂಜಲಿ ಅವರ ತಾಯಿ ಚೈತ್ರಾರನ್ನು ಮೂಡಿಗೆರೆಯಲ್ಲಿ ಪತ್ತೆ ಮಾಡಲಾಗಿದೆ. ತಾಯಿಯನ್ನು ಕಂಡ ಮಗಳು ಅಂಜಲಿ ಓಡಿ ಹೋಗಿ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಈ ಮೂಲಕ 22 ವರ್ಷಗಳಿಂದ ಬೇರೆಯಾಗಿದ್ದ ತಾಯಿ-ಮಗಳು ಸಿನಿಮೀಯ ರೀತಿಯಲ್ಲಿ ಮತ್ತೆ ಒಂದಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ