ಮಂಡ್ಯ: ತಮಿಳುನಾಡು ದೇವಾಲಯಗಳ ಪ್ರವಾಸಕ್ಕೆ ತೆರಳಿದ್ದ 30 ಮಹಿಳೆಯರಿಗೆ ಕೋವಿಡ್ ಸೋಂಕು

ಮಂಡ್ಯ: ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ಪ್ರವಾಸ ಕೈಗೊಂಡಿದ್ದ ಮಂಡ್ಯ ಜಿಲ್ಲೆಯ 30 ಮಹಿಳೆಯರಿಗೆ ಕೋವಿಡ್ 19 ಸೋಂಕು ದೃಢವಾಗಿದೆ.
ಕಳೆದ ವಾರ ಶ್ರೀರಂಗಪಟ್ಟಣದ ವಿವಿಧ ಗ್ರಾಮಗಳಿಂದ ಆರು ಬಸ್ ಗಳಲ್ಲಿ ಮಹಿಳಾ ಭಕ್ತರು ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದರು.
ಈಗಾಗಲೇ ನಾಲ್ಕು ಬಸ್ ಗಳು ವಾಪಸ್ಸು ಬಂದಿವೆ. ಬಂದವರಲ್ಲಿ 30ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಸೋಂಕು ಪಾಸಿಟಿವ್ ದೃಢವಾಗಿದೆ. ಇಂದು ಅಥವಾ ನಾಳೆ ಮತ್ತೆರಡು ಬಸ್ ಶ್ರೀರಂಗಪಟ್ಟಣಕ್ಕೆ ವಾಪಾಸ್ಸಾಗುವ ಸಾಧ್ಯತೆ ಇದೆ. ಆರೋಗ್ಯ ಸಿಬ್ಬಂದಿ ತಮಿಳುನಾಡಿನಿಂದ ವಾಪಸ್ಸಾದವರ ಟೆಸ್ಟ್ ಮಾಡುತ್ತಿದ್ದಾರೆ.
ಮಂಡ್ಯ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, 30 ಮಂದಿಯ ಮಾದರಿ ಸಂಗ್ರಹಿಸಿ ಓಮಿಕ್ರಾನ್ ಟೆಸ್ಟ್‌ ಗೆ ಕಳುಹಿಸಲಾಗಿದೆ. ಸೋಂಕಿತರಿಗೆ ಹೋಂ ಐಸೋಲೇಷನ್‌ ನೀಡದೆ ಶ್ರೀರಂಗಪಟ್ಟಣದ‌ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement