ಮೊಲ್ನುಪಿರವಿರ್ ಕೋವಿಡ್ ಮಾತ್ರೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯ ಸಾಧ್ಯತೆ: ಬೆಲೆ ಬಗ್ಗೆಯೂ ಕಂಪನಿ ಹೇಳಿಕೆ

ಹೈದರಾಬಾದ್: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ.ಗಳಿಗೆ ಮೊಲ್ನುಪಿರವಿರ್ ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ.
ಮೊಲ್ನುಪಿರವಿರ್ ಮಾತ್ರೆಗಳ ಬೆಲೆ ಕೇವಲ 35 ರೂ.ಗಳು ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ವಾರ ದೇಶಾದ್ಯಂತ ಔಷಧ ಮಾರುಕಟ್ಟೆಗಳಲ್ಲಿ ಈ ಮಾತ್ರೆಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ. ಪ್ರತಿ ಸ್ಟ್ರೀಪ್ ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳ ವರೆಗೂ 40 ಮಾತ್ರೆಗಳಿಗೆ ರೂ. 1,400 ವೆಚ್ಚ ತಗುಲಲಿದೆ. ಕೋವಿಡ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಈ ಮಾತ್ರೆಗಳಲ್ಲಿ ತಯಾರಿಸಲಾಗಿದೆ.
ಭಾರತ ಹಾಗೂ 100 ಕಡಿಮೆ, ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಮೊಲ್ನಪಿರವಿರ್ ಮಾತ್ರೆ ಪೂರೈಸಲು ಎಂಎಸ್ ಡಿ ಕಂಪನಿಯೊಂದಿಗೆ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. ಈ ಮಾತ್ರೆಗಳ ಮೂರನೇ ಹಂತದ ಪ್ರಯೋಗವನ್ನು ತಜ್ಞರ ಸಮಿತಿ ಮುಂದೆ ಇಡಲಾಗಿತ್ತು.
ಆಸ್ಪತ್ರೆಯಲ್ಲಿರುವ ಅಥವಾ ಹೆಚ್ಚಿನ ಅಪಾಯವಿರುವ ವಯಸ್ಕ ರೋಗಿಗಳಿಗೆ 200 ಎಂಜಿ ಮೊಲ್ನಪಿರವಿರ್ ಮಾತ್ರೆಗಳ ತಯಾರಿಕೆ ಹಾಗೂ ಮಾರುಕಟ್ಟೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಳೆದ ವಾರ ಅನುಮೋದನೆ ನೀಡಿತ್ತು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement