ಈ ದೃಶ್ಯ ನೋಡಿದರೆ ನೀವು ಬೆರಗಾಗುತ್ತೀರಿ. ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೊ ಕ್ಲಿಪ್ ಒಂದು ಕ್ಷಣ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಈ ವಿಡಿಯೊ ಕ್ಲಿಪ್‌ನಲ್ಲಿ ಮಹಿಳೆಯೊಬ್ಬಳು ತನ್ನ ತೋಳಿನಲ್ಲಿ ಸಿಂಹಿಣಿಯೊಂದನ್ನು ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು…!
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಕ್ಲಿಪ್‌ನಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಸಿಂಹಿಣಿಯನ್ನು ಹೊತ್ತಿರುವ ದೃಶ್ಯವನ್ನು ನೋಡಬಹುದು. ಕ್ಲಿಪ್ ಖಂಡಿತವಾಗಿಯೂ ನಿಮ್ಮನ್ನು ಒಂದುಕ್ಷಣ ದಿಗ್ಭ್ರಮೆಗೊಳಿಸುತ್ತದೆ.
ಅರ್ಲಾಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಿಂಹಿಣಿಯನ್ನು ಮಹಿಳೆ ತನ್ನ ತೋಳುಗಳಲ್ಲಿ ಹೊತ್ತಿದ್ದಾರೆ. ಇದು ಕುವೈತ್ ನಗರದ ದಕ್ಷಿಣ ಭಾಗದಲ್ಲಿರುವ ಸಬಾಹಿಯಾ ಪ್ರದೇಶದಲ್ಲಿ ನಡೆದ ವಿದ್ಯಮಾನವಾಗಿದೆ.
ಕುವೈತ್ ಪತ್ರಿಕೆ ಅಲ್-ಅನ್ಬಾ ಪ್ರಕಾರ, ಸಿಂಹಿಣಿ ತಪ್ಪಿಸಿಕೊಂಡ ಘಟನೆ ಭಾನುವಾರ ನಡೆದಿದೆ. ಸಿಂಹಿಣಿಯನ್ನು ವಿಡಿಯೊದಲ್ಲಿದ್ದ ಮಹಿಳೆ ಮತ್ತು ಆಕೆಯ ತಂದೆ ಸಾಕಿದ್ದರು. ಸಿಂಹಿಣಿ ಆಕಸ್ಮಿಕವಾಗಿ ತಪ್ಪಿಸಿಕೊಂಡು ಬೀದಿಗಳಲ್ಲಿ ಅಲೆದಾಡುತ್ತಿದ್ದಾಗ ನಿವಾಸಿಗಳು ಭಯಬೀತಿಗೊಂಡಿದ್ದರು. ಆಗ ಮಹಿಳೆ ಅದನ್ನು ಹಿಡಿದು ತನ್ನ ತೋಳುಗಳಲ್ಲಿ ಅನಾಮತ್ತಾಗಿ ಹೊತ್ತು ತರುತ್ತಿದ್ದಾಳೆ. ಈ ಸಿಂಹಿಣಿಯು ನಾಯಿ-ಬೆಕ್ಕುಗಳಂತೆ ತಪ್ಪಿಸಿಕೊಳ್ಳಲು ಕೊಸರಾಡುತ್ತಿದೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಹೆಣ್ಣು ಸಿಂಹವನ್ನು ಸಾಕಿದ್ದರೂ ಅದನ್ನು ಬೆಕ್ಕಿನ ಮರಿಯಂತೆ ಹಿಡಿದು ತರುತ್ತಿರುವುದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ