ಪ್ರಧಾನಿ ಮೋದಿ ಬೆಂಗಾವಲು ತಡೆದ ‘ಪ್ರತಿಭಟನೆಕಾರರೊಂದಿಗೆ’ ಪಂಜಾಬ್ ಪೊಲೀಸರ ಚಹಾಸೇವನೆ: ಹೊರಹೊಮ್ಮಿದ ವಿಡಿಯೋ..!!

ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ವಾಹನವನ್ನು ತಡೆಯುವಲ್ಲಿ ಪಂಜಾಬ್ ಪೊಲೀಸರು ನಿಷ್ಕ್ರಿಯರಾಗಿದ್ದರು ಹಾಗೂ ನಿರ್ಲಕ್ಷ್ಯ ವಹಿಸಿದ್ದರು ಎಂಬುದಕ್ಕೆ ಈಗ ಪಂಜಾಬ್‌ ಪೊಲೀಸರು ಪ್ರತಿಭಟನಾಕಾರರೊಂದಿಗೆ ಚಹಾ ಕುಡಿಯುತ್ತಿರುವ ವಿಡಿಯೊ ವೈರಲ್‌ ಆಗಿದೆ.
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾ ಬಳಿ 5 ಜನವರಿ 2022 ರಂದು ಸಂಭವಿಸಿದ ಪ್ರಧಾನಿ ಮೋದಿಯ ಭದ್ರತಾ ಲೋಪದ ಪ್ರಮುಖ ಅಪ್‌ಡೇಟ್‌ನಂತೆ ಈ ವೀಡಿಯೊಗಳು ವೈರಲ್ ಆಗಿವೆ. ಇದರಲ್ಲಿ ಪಂಜಾಬ್ ಪೊಲೀಸರು ಪ್ರತಿಭಟನಾಕಾರರೊಂದಿಗೆ ಚಹಾ ಸೇವಿಸುತ್ತಿರುವುದನ್ನು ಕಾಣಬಹುದು, ಆದರೆ ಬೆಂಗಾವಲು ಪಡೆ ಅವರಿಂದ ದೂರದಲ್ಲಿ ಸಿಲುಕಿಕೊಂಡಿದೆ. ಕೆಲವರು ಪ್ರಧಾನಿಯವರ ಬೆಂಗಾವಲು ಪಡೆಯೊಂದಿಗೆ ಓಡುತ್ತಿರುವುದನ್ನು ಸಹ ಸ್ಪಷ್ಟವಾಗಿ ಕಾಣಬಹುದು. ಈ ಸಂಪೂರ್ಣ ಘಟನೆಯು ದೇಶದ ಅತ್ಯಂತ ಸಂರಕ್ಷಿತ ವ್ಯಕ್ತಿಯ ಭದ್ರತೆಯಲ್ಲಿ ಗಂಭೀರ ಲೋಪವಾಗಿದೆ. ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಬೆಂಗಾವಲು ಪಡೆಗೆ ಸುರಕ್ಷಿತ ಮಾರ್ಗಗಳನ್ನು ತೋರಬೇಕಿದ್ದ ಪೊಲೀಸರು ಪ್ರಧಾನಿ ಕಾರು ಹೋಗುವ ಮಾರ್ಗ ತಡೆದ ಪ್ರತಿಭಟನಾಕಾರರೊಂದಿಗೆ ಚಹಾಕೂಟದಲ್ಲಿ ನಿರತರಾಗಿದ್ದರು…!

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿ ತೆರಳುತ್ತಿದ್ದಾಗ ಪಂಜಾಬ್‌ನಲ್ಲಿ ಸಂಭವಿಸಿದ ಅಪಾಯಕಾರಿ ಬೆಳವಣಿಗೆಯಲ್ಲಿ, ಅವರ ಬೆಂಗಾವಲು ವಾಹನದ ರಸ್ತೆಗಳನ್ನು ನಿರ್ಬಂಧಿಸಲಾಗಿತ್ತು ಮತ್ತು ಬೆಂಗಾವಲು ವಾಹನಗಳು ಫ್ಲೈಓವರ್‌ನಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಸಿಲುಕಿಕೊಂಡಿತ್ತು. ಈ ಹಿಂದೆ ಬಟಿಂಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಪ್ರಧಾನಿ ಮೋದಿ ಹೆಲಿಕಾಪ್ಟರ್‌ನಲ್ಲಿ ತೆರಳಲು ಯೋಜಿಸಲಾಗಿತ್ತು. ಆದರೆ ಕೆಟ್ಟ ಹವಾಮಾನದ ಕಾರಣ, ವೈಮಾನಿಕ ಮಾರ್ಗವನ್ನು ರದ್ದುಗೊಳಿಸಲಾಯಿತು ಮತ್ತು ಮೂವತ್ತು ನಿಮಿಷಗಳ ಅಂತರದ ನಂತರ ಈ ಸಮಯದಲ್ಲಿ ಪಂಜಾಬ್ ಪೊಲೀಸರು ಹೆಚ್ಚಿನ ಭದ್ರತಾ ನಿರ್ವಹಣೆಯನ್ನು ಖಚಿತಪಡಿಸಿಕೊಂಡ ನಂತರ ಪ್ರಧಾನಿ ಬೆಂಗಾವಲು ಪಡೆ ರಸ್ತೆ ಮಾರ್ಗವನ್ನು ತೆಗೆದುಕೊಂಡಿತು, ವಿವಿಐಪಿ ಚಲನವಲನದ ಪ್ರೋಟೋಕಾಲ್ ಪ್ರಕಾರ, ರಸ್ತೆ ಮಾರ್ಗವನ್ನು ಈಗಾಗಲೇ ಎಸ್‌ಪಿಜಿ ಮತ್ತು ಪಂಜಾಬ್ ಪೊಲೀಸರು ಮೊದಲೇ ಯೋಜಿಸಿದ್ದರು ಮತ್ತು ಪ್ರಧಾನಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದ ನಂತರ ಪಂಜಾಬ್ ಪೊಲೀಸರು ಮಾರ್ಗವನ್ನು ಸುರಕ್ಷಿತವಾಗಿರಿಸಬೇಕಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ
https://twitter.com/MeghBulletin/status/1478714880177831939?ref_src=twsrc%5Etfw%7Ctwcamp%5Etweetembed%7Ctwterm%5E1478714880177831939%7Ctwgr%5E%7Ctwcon%5Es1_&ref_url=https%3A%2F%2Fwww.opindia.com%2F2022%2F01%2Fpunjab-police-tea-with-protesters-blocked-pm-modi-convoy%2F

 

ಟೀ ಸೇವನೆ
ಪ್ರಧಾನಿ ಬೆಂಗಾವಲು ಪಡೆಗೆ ರಸ್ತೆಗಳನ್ನು ನಿರ್ಬಂಧಿಸಿದಾಗ, ಪೊಲೀಸರು ಪ್ರತಿಭಟನಾಕಾರರ ಜೊತೆ ಟೀ ಕುಡಿಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಪಂಜಾಬ್ ಪೊಲೀಸರು ರಸ್ತೆ ಮಾರ್ಗದ ಪ್ರಯಾಣದಲ್ಲಿ ಬೆಂಗಾವಲು ಪಡೆಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಬದಲಾಗಿ ಧರಣಿ ನಿರತ ರೈತರು ಹಂಚಿದ ಬಿಸಿ ಬಿಸಿ ಚಹಾ ಸೇವಿಸುತ್ತಿದ್ದರು. ಈ ಟೀ ಪಾರ್ಟಿಯ ಸ್ಥಳವು ಬೆಂಗಾವಲು ಪಡೆ ಸಿಲುಕಿಕೊಂಡಿದ್ದ ಫ್ಲೈಓವರ್‌ನಿಂದ ಹೆಚ್ಚು ದೂರವಿರಲಿಲ್ಲ.

ಇದಕ್ಕಿಂತ ವಿಶೇಷವೆಂದರೆ ರಸ್ತೆ ನಡೆಸುವವರಿಗೆ ಪ್ರಧಾನಿ ಇದೇ ಮಾರ್ಗದಿಂದ ಸಾಗುತ್ತಿದ್ದಾರೆ ಎಂಬುದು ಸಹ ಮೊದಲೇ ತಿಳಿದಿತ್ತು. ಇದನ್ನು ರೈತ ಮುಖಂಡರೊಬ್ಬರು ರಾಷ್ಟ್ರೀಯ ಮಾಧ್ಯಮದ ಮುಂದೆಯೂ ಹೇಳಿದ್ದಾರೆ. ಪಂಜಾಬ್ ಪೊಲೀಸ್ ಮತ್ತು ಸ್ಥಳೀಯ ಆಡಳಿತಕ್ಕೆ ಸೀಮಿತವಾಗಿರಬೇಕಿದ್ದ ಸೂಕ್ಷ್ಮ ಮಾಹಿತಿಯ ಸೋರಿಕೆಗೆ ಹೇಗೆ ಸೋರಿಕೆಯಾಯಿತು ಎಂಬುದು ಸಹ ಈಗ ತನಿಖೆಯ ವಿಷಯವೇ ಆಗಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement