ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿ; ಏನಿರುತ್ತದೆ..? ಏನಿರಲ್ಲ?

ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ ? ಏನಿರಲ್ಲ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹಾಗೂ ಹೊಸ ರಫಾಂತರ ಓಮಿಕ್ರಾನ್‌ ಸೋಂಕು ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನಿಯಂತ್ರಣದ ಕ್ರಮವಾಗಿ ನೈಟ್​ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೆ ತಂದಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ವಾರಾಂತ್ಯದ ಕರ್ಫ್ಯೂ ಆರಂಭವಾಗಲಿದ್ದು ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಇರಲಿದೆ.
ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಇಂದು ರಾತ್ರಿಯಿಂದ ವೀಕೆಂಡ್ ಕರ್ಫ್ಯೂ (Weekend Curfew) ಜಾರಿ ಆಗುತ್ತಿದೆ. ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಯಾವೆಲ್ಲ ಚಟುವಟಿಕೆಗಳಿಗೆ ನಿರ್ಬಂಧವಿದೆ ಹಾಗೂ ಯಾವುದಕ್ಕೆ ಅವಕಾಶ ನೀಡಲಾಗಿದೆ ಎಂಬುದರ ಮಾಹಿತಿ ಕೊಡಲಾಗಿದೆ.

ಯಾವುದಕ್ಕೆ ಅವಕಾಶ..:

*ವಾರಾಂತ್ಯದ ಅವಧಿಯಲ್ಲಿ ಅಗತ್ಯ ಸೇವೆಗಳು, ತುರ್ತು ಸೇವೆಗಳು , ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸಲಿವೆ.
* ಐಟಿ ಹಾಗೂ ಕೈಗಾರಿಕಾ ವಲಯಗಳಿಗೆ ನಿರ್ಬಂಧ ಇಲ್ಲ. ಕಂಪನಿಯ ಗುರುತಿನ ಚೀಟಿ ತೋರಿಸಿ ಕೆಲಸಕ್ಕೆ ಹಾಜರಾಗಬಹುದು
*ರೋಗಿಗಳು ಹಾಗೂ ಅವರ ಸಂಬಂಧಿಗಳು, ಲಸಿಕೆ ತೆಗೆದುಕೊಳ್ಳುವವರು ತುರ್ತು ಸೇವೆಗಳ ಅಗತ್ಯ ಇರುವವರು ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಓಡಾಟ ನಡೆಸಬಹುದು
* ಹಣ್ಣು ಹಾಗೂ ತರಕಾರಿ ಅಂಗಡಿ, ನ್ಯಾಯಬೆಲೆ ಅಂಗಡಿಗಳು, ಡೈರಿ ಉತ್ಪನ್ನಗಳು, ದಿನಸಿ ಅಂಗಡಿಗಳು, ಮೀನು ಹಾಗೂ ಮಾಂಸದ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ.
*ಬೀದಿ ಬದಿ ವ್ಯಾಪಾರಿಗಳೂ ವ್ಯಾಪಾರ ವ್ಯವಹಾರ ನಡೆಸಬಹುದು.
*ಮನೆ ಡೆಲಿವರಿ ಪಡೆಯುವವರಿಗೆ ಅವಕಾಶ, ರೆಸ್ಟಾರೆಂಟ್​ ಹಾಗೂ ಹೋಟೆಲ್​ಗಳಲ್ಲಿ ಪಾರ್ಸಲ್​ ನೀಡಲು ಮಾತ್ರ ಅವಕಾಶ
*ವಿರಳ ಸಂಖ್ಯೆಯಲ್ಲಿ ಬಸ್​ ಸೇವೆ, ರೈಲು ಸೇವೆ ಹಾಗೂ ವಿಮಾನ ಸೇವೆ ಇರಲಿದೆ. ಜನ ದಟ್ಟಣೆಗೆ ಅನುಸಾರವಾಗಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ,
* ಶೇ10 ರಷ್ಟು ಬಿಎಂಟಿಸಿ ಬಸ್ ಗಳು ರಸ್ತೆಗೆ ಇಳಿಯಲಿದೆ ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳ ಓಡಾಟಕ್ಕೂ ಅವಕಾಶ
* ಪರೀಕ್ಷೆ ಬರೆಯುವವರು ಹಾಲ್‌ ಟಿಕೆಟ್‌ ತೋರಿಸಿ ವಾಹನಗಳಲ್ಲಿ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದು.
* ಪ್ರಯಾಣಿಕರು ತಮ್ಮ ಟಿಕೆಟ್ ತೋರಿಸುವ ಮೂಲಕ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್​ ನಿಲ್ದಾಣಗಳಿಗೆ ಸಂಚರಿಸಬಹುದಾಗಿದೆ.
* ಪೆಟ್ರೋಲ್‌ ಬಂಕ್‌ಗಳು, ಕೃಷಿ ಮಾರುಕಟ್ಟೆಗಳು ತೆರೆಯಲಿವೆ
* ಮೆಟ್ರೋ ಪ್ರಯಾಣದ ಸಮಯದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ.
* ವಾರಾಂತ್ಯದ​ ಕರ್ಫ್ಯೂ ಅವಧಿಯಲ್ಲಿ ಪೂರ್ವ ನಿಗದಿತ ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಚರಿಸಲು ಅನುಮತಿ

ಯಾವುದೆಲ್ಲ ಬಂದ್‌ ಇರುತ್ತವೆ..

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

*ಚಿತ್ರಮಂದಿರಗಳು, ಮಾಲ್‌ಗಳನ್ನು ತೆರೆಯುವಂತಿಲ್ಲ.
*ವಾಹನ ಸರ್ವೀಸ್ ಸೆಂಟರ್‌ಗಳು ಕಾರ್ಯನಿರ್ವಹಿಸುವುದಿಲ್ಲ
*ಈಜು ಕೊಳಗಳು, ಜಿಮ್‌ ತೆರೆಯುವಂತಿಲ್ಲ.
* ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌, ಬಾರ್‌ಗಳು ತೆರೆಯುವುದಿಲ್ಲ
* ಸಾರ್ವಜನಿಕ ಗ್ರಂಥಾಲಯಗಳು, ಬ್ಯೂಟಿ ಪಾರ್ಲರ್‌ಗಳು, ಸಲೂನ್‌ ಶಾಪ್‌ ತೆರೆಯುವುದಿಲ್ಲ.
*ಸಾರ್ವಜನಿಕ ಉದ್ಯಾನವಗಳು ಬಂದ್​ ಇರಲಿವೆ.

*ಅನಗತ್ಯವಾಗಿ ಹೊರಬರುವಂತಿಲ್ಲ..

3.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement