ಲೋಕಸಭೆ, ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ ಹೆಚ್ಚಳ

ನವದೆಹಲಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು 70 ಲಕ್ಷದಿಂದ 95 ಲಕ್ಷಕ್ಕೆ ಮತ್ತು ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ವೆಚ್ಚವನ್ನು 28 ​​ಲಕ್ಷದಿಂದ 40 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ಕಾನೂನು ಸಚಿವಾಲಯದ ಅಧಿಸೂಚನೆಯನ್ನು ಉಲ್ಲೇಖಿಸಿ ತಿಳಿಸಿದೆ.
ಚುನಾವಣಾ ಸಮಿತಿ ನೀಡಿದ ಶಿಫಾರಸಿನ ಮೇರೆಗೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆ ಚುನಾವಣೆಗೆ, ಪರಿಷ್ಕೃತ ವೆಚ್ಚದ ಮಿತಿ ಈಗ ದೊಡ್ಡ ರಾಜ್ಯಗಳಿಗೆ 90 ಲಕ್ಷ ರೂ.ಗಳು ಮತ್ತು ಸಣ್ಣ ರಾಜ್ಯಗಳಿಗೆ 75 ರೂ.ಗಳಾಗಿವೆ. ಮೊದಲು ಈ ಮಿತಿ ದೊಡ್ಡ ರಾಜ್ಯಗಳಿಗೆ 70 ಲಕ್ಷ ರೂ.ಗಳು ಮತ್ತು ಸಣ್ಣ ರಾಜ್ಯಗಳಿಗೆ 54 ಲಕ್ಷ ರೂ.ಗಳಿತ್ತು.
ವಿಧಾನಸಭಾ ಚುನಾವಣೆಗಳಿಗೆ, ಅಭ್ಯರ್ಥಿಗಳ ಪರಿಷ್ಕೃತ ಚುನಾವಣಾ ವೆಚ್ಚದ ಮಿತಿಯು ದೊಡ್ಡ ರಾಜ್ಯಗಳಿಗೆ ಅಭ್ಯರ್ಥಿಗೆ 28 ಲಕ್ಷ ರೂ.ಗಳ ಬದಲಿಗೆ 40 ಲಕ್ಷ ರೂ.ಗಳಾಗಿದ್ದು, ಸಣ್ಣ ರಾಜ್ಯಗಳ ಅಭ್ಯರ್ಥಿಗಳು ಈಗ 20 ಲಕ್ಷ ರೂ.ಗಳ ಬದಲಿಗೆ ಗರಿಷ್ಠ 28 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಹೊಸ ವೆಚ್ಚದ ಮಿತಿಗಳು ಅನ್ವಯವಾಗುತ್ತವೆ ಎಂದು ಚುನಾವಣಾ ಆಯೋಗವು ಹೇಳಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳಿಗೆ ಈಗ ಹೆಚ್ಚಿದ ಚುನಾವಣಾ ವೆಚ್ಚ ಅನ್ವಯಿಸುತ್ತದೆ.
ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಆಯೋಗವು ಮುಂದಿನ ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement