ಅಗರ್ತಲದಲ್ಲಿ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಧಾರವಾಡದ ಮೂವರು ವಿದ್ಯಾರ್ಥಿಗಳು ಆಯ್ಕೆ

ಧಾರವಾಡ: ತ್ರಿಪುರ ರಾಜ್ಯದ ಅಗರ್ತಲದಲ್ಲಿ ಜನವರಿ 15ರಿಂದ 21ರ ವರೆಗೆ ಆಯೋಜಿಸಿರುವ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಧಾರವಾಡ ಯುವ ನೃತ್ಯ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇದನ್ನು ತ್ರಿಪುರದ ಯುವ ವಿಕಾಸ ಕೇಂದ್ರವು ಆಯೋಜಿಸಿದೆ. ಧಾರವಾಡ ಜಿಲ್ಲೆಯ ಯುವ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಮೇಸ್ತ್ರಿ, ಪ್ರತೀಕ ದೇಶಮನಿ, ವಿನೂತಾ ಹೊಸಮನಿ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಕಲಾ ಯುವ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಮೂವರು ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸುವುದರ ಮುಖಾಂತರ ಅದೇಷ್ಟೋ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಾಷ್ಟ್ರೀಯ ಯುವ ಪರಂಪರೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಕ್ಕೆ ಯುವ ನೃತ್ಯ ಸಂಸ್ಥೆಯ ಸಂಸ್ಥಾಪಕ ಹಾಗೂ ನೃತ್ಯ ಶಿಕ್ಷಕ ರಮೇಶ್ ಪಾಟೀಲ ಸಹ ಅಗರ್ತಲ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಇದು ಕರ್ನಾಟಕಕ್ಕೆ, ವಿಶೇಷವಾಗಿ ಧಾರವಾಡ ವಿಭಾಗಕ್ಕೆ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement