ಪ್ರಧಾನಿ ಭದ್ರತಾ ಲೋಪದ ಆರೋಪದ ಬೆನ್ನಲ್ಲೇ ಪಂಜಾಬ್​ನಲ್ಲಿ ನೂತನ ಡಿಜಿಪಿ ನೇಮಕ

ಚಂಡೀಗಢ: ಪಂಜಾಬ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಹಾಗೇ, ಸುಪ್ರೀಂ ಕೋರ್ಟ್​ನಲ್ಲೂ ಈ ಬಗ್ಗೆ ವಿಚಾರಣೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಶನಿವಾರ (ಶನಿವಾರ) ವಿ.ಕೆ. ಭಾವ್ರ ಅವರನ್ನು ಪಂಜಾಬಿನ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಡಿಜಿಪಿ) ನೇಮಕ ಮಾಡಿದೆ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಂತಿಮಗೊಳಿಸಿದ್ದ ಮೂರು ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾವ್ರ ಅವರನ್ನು ಡಿಜಿಪಿಯಾಗಿ ಆಯ್ಕೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ದಿನಕರ್ ಗುಪ್ತಾ ಮತ್ತು ಪ್ರಬೋಧ್ ಕುಮಾರ್ ಇತರರ ಹೆಸರು ಕೂಡ ಇತ್ತು. ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ವಿ.ಕೆ. ಭಾವ್ರ 1987ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಪಂಜಾಬ್​ನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ  ಅಧಿಕಾರಾವಧಿಯ ಸುಮಾರು 100 ದಿನಗಳಲ್ಲಿ ಮೂರನೇ ಬಾರಿಗೆ ಡಿಜಿಪಿಯನ್ನು ಬದಲಿಸಲಾಗಿದೆ. ಚುನಾವಣಾ ಆಯೋಗವು ಮುಂದಿನ ತಿಂಗಳ ಚುನಾವಣೆಗೆ ಇಂದು ದಿನಾಂಕವನ್ನು ನಿಗದಿ ಮಾಡಿದ್ದು, ಅದಕ್ಕೂ ಮೊದಲೇ ಪಂಜಾಬ್ ಸರ್ಕಾರ ನೂತನ ಡಿಜಿಪಿಯನ್ನು ನೇಮಕ ಮಾಡಿದೆ.
ನಿರ್ಗಮಿತ ಪಂಜಾಬ್ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕೇಂದ್ರ ಗೃಹ ಸಚಿವಾಲಯದ ತಂಡವು ಕರೆಸಿದ್ದು, ಫಿರೋಜ್‌ಪುರ ಜಿಲ್ಲೆಯ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಪ್ರಧಾನಿಯವರ ವಾಹನ ಮೆರವಣಿಗೆಯನ್ನು ಹಿಡಿದಿಟ್ಟುಕೊಳ್ಳಲು ಕಾರಣವಾದ ಸಂದರ್ಭಗಳ ಕುರಿತು ವಿಚಾರಣೆ ನಡೆಸುತ್ತಿದೆ.  ಹೊಸದಾಗಿ ನೇಮಕವಾಗಿರುವ ಡಿಜಿಪಿ ವಿಕೆ ಭಾವ್ರ ಎರಡು ವರ್ಷಗಳ (ಕನಿಷ್ಠ) ಅಧಿಕಾರಾವಧಿಯನ್ನು ಹೊಂದಿರುತ್ತಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ