ಹೆಬ್ಬಾವು ಅಡಿಕೆ ಮರವನ್ನು ಏರುವ ರೀತಿ ಹೇಗಿರುತ್ತದೆ..? ಇಲ್ಲಿದೆ ನೋಡಿ ವಿಡಿಯೊ

ವನ್ಯಜೀವಿಗಳಿಗೆ ಸಂಬಂಧಿಸಿದ ವಿಡಿಯೊಗಳು ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಈ ವಿಡಿಯೊಗಳಲ್ಲಿ ಕೆಲವು ತುಂಬಾ ಅಪರೂಪದ್ದಾಗಿರುತ್ತದೆ. ಸಾಮಾನ್ಯವಾಗಿ ಹೆಬ್ಬಾವುಗಳಿಗೆ ಸಂಬಂಧಿಸಿದ ವಿಡಿಯೊಗಳು ಸೆರೆ ಸಿಕ್ಕುವುದು ಕಷ್ಟ ಹಾಗೂ ಅಷ್ಟೇ ಅಪಾಯಕಾರಿಯೂ ಆಗಿರುತ್ತದೆ. ಹಾಗೂ ಹೆಚ್ಚು ಗಮನ ಸೆಳೆಯುತ್ತವೆ. ಇಂಥದ್ದೇ ಒಂದು ಅಪರೂಪದ ವಿಡಿಯೊದಲ್ಲಿ ಹೆಬ್ಬಾವು ಅಡಿಕೆ ಮರವನ್ನು (Python Climbs Tree) ಏರುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೆಬ್ಬಾವಿನ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ (Susanta Nanda) ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹೆಬ್ಬಾವು ಮರವೊಂದಕ್ಕೆ ಸುತ್ತಿಕೊಂಡಿದ್ದು, ಮರದ ಮೇಲ್ಭಾಗದಲ್ಲಿ ಅತ್ಯಂತ ವೇಗವಾಗಿ ಏರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೆಬ್ಬಾವು ಸುಮಾರು 10-೧೨ ಅಡಿ ಇರಬಹುದು.
ಹಾವುಗಳು ಸಾಮಾನ್ಯವಾಗಿ “ಕನ್ಸರ್ಟಿನಾ ಲೊಕೊಮೊಷನ್” ಎಂಬ ಹಿಡಿತ ಮತ್ತು ಬಿಡುಗಡೆಯ ಚಲನೆ ಮೂಲಕ ಮರಗಳನ್ನು ಏರುತ್ತವೆ. ಇದು ತನ್ನ ದೇಹದಲ್ಲಿ S- ಆಕಾರದ ಬಾಗುವಿಕೆಯೊಂದಿಗೆ ಮರದ ಮೇಲೆ ಎರಡು ಕಡೆ ಗ್ರಿಪ್‌ಗಳನ್ನು ಹಿಡಿಯುತ್ತದೆ ಮತ್ತು ಕಾಂಡದ ಸುತ್ತಲೂ ಅನೇಕ ಬಾರಿ ಸುತ್ತುತ್ತದೆ. ಹೀಗೆ ಸುತ್ತುತ್ತಲೇ ಮೇಲೆ ಸಾಗುತ್ತದೆ. ಇದು ವಿಶಿಷ್ಟ ಚಲನೆಯಾಗಿ ರೂಪುಗೊಳ್ಳುತ್ತದೆ. ಈ ವಿಡಿಯೋ ವೈರಲ್‌ ಆದ ಬಳಿಕ ಜನರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್
https://twitter.com/i/status/1478383299936636929

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement