“ಸುಲ್ಲಿ ಡೀಲ್ಸ್‌ ನಲ್ಲಿ ಮುಸ್ಲಿಂ ಮಹಿಳೆಯರ ‘ಹರಾಜು’ ಅಪ್ಲಿಕೇಶನ್ ಸೃಷ್ಟಿಕರ್ತ ಇಂದೋರ್‌ನಲ್ಲಿ ಬಂಧನ

ನವದೆಹಲಿ: ‘ಸುಲ್ಲಿ ಡೀಲ್ಸ್’ ಎಂಬ ಅಪ್ಲಿಕೇಶನ್‌ನ ಸೃಷ್ಟಿಕರ್ತ ಎಂದು ಹೇಳಲಾದ ಮಧ್ಯಪ್ರದೇಶದ ವ್ಯಕ್ತಿಯನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಸುಲ್ಲಿ ಡೀಲ್ಸ್” ಆ್ಯಪ್‌ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ.
ಕಳೆದ ವರ್ಷ ಬಿಡುಗಡೆಯಾದ ಆ್ಯಪ್‌ನಲ್ಲಿ ಅನುಮತಿಯಿಲ್ಲದೆ ಫೋಟೋಗಳೊಂದಿಗೆ ಮುಸ್ಲಿಂ ಮಹಿಳೆಯರನ್ನು ‘ಹರಾಜಿಗೆ’ ಪಟ್ಟಿ ಮಾಡಲಾಗಿತ್ತು.
‘ಸುಲ್ಲಿ ಡೀಲ್ಸ್’ ಮತ್ತು ಇತ್ತೀಚೆಗೆ ರಚಿಸಲಾದ ‘ಬುಲ್ಲಿ ಬಾಯಿ’ ಅಪ್ಲಿಕೇಶನ್‌ಗಳಲ್ಲಿ ಮುಸ್ಲಿಂ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದೆ ಮತ್ತು ಅವರ ವಿರುದ್ಧ ಅನುಚಿತ ಟೀಕೆಗಳನ್ನು ರವಾನಿಸಲಾಗಿದೆ. ಎರಡೂ ಅಪ್ಲಿಕೇಶನ್‌ಗಳು ಕದ್ದ ಫೋಟೋಗಳನ್ನು ಹರಾಜು ಮಾಡಲು ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ‘ಗಿಟ್‌ಹಬ್’ ಅನ್ನು ಬಳಸಿಕೊಂಡಿವೆ.
ಆರೋಪಿ ಓಂಕಾರೇಶ್ವರ್ ಠಾಕೂರ್ ಅವರನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ದೆಹಲಿ ಪೊಲೀಸರ ಗುಪ್ತಚರ ವಿಭಾಗ (IFSO) ಬಂಧಿಸಿದೆ.
ಓಂಕಾರೇಶ್ವರ ಠಾಕೂರ್ ಅವರನ್ನು ಇಂದೋರ್‌ನಿಂದ ಬಂಧಿಸಲಾಗಿದೆ. ಸುಲ್ಲಿ ಡೀಲ್ ಆ್ಯಪ್ ಪ್ರಕರಣದ ಹಿಂದಿನ ಈತ ಪ್ರಮುಖ ಸೂತ್ರಧಾರ ಎಂದು ದೆಹಲಿ ಪೊಲೀಸ್ ವಿಶೇಷ ಕೋಶದ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ ಘಟಕದ ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
26ರ ಹರೆಯದ ಠಾಕೂರ್ ಅವರು ಇಂದೋರ್‌ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ವ್ಯಾಸಂಗ ಮಾಡಿದ್ದಾರೆ ಮತ್ತು ನ್ಯೂಯಾರ್ಕ್ ಸಿಟಿ ಟೌನ್‌ಶಿಪ್‌ನ ನಿವಾಸಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಠಾಕೂರ್ ಅವರು ಗಿಟ್‌ಹಬ್‌ನಲ್ಲಿ ‘ಸುಲ್ಲಿ ಡೀಲ್ಸ್’ ಕೋಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಟ್ವಿಟರ್‌ನಲ್ಲಿ ಅಪ್ಲಿಕೇಶನ್ ಅನ್ನು ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement