ಕರ್ನಾಟಕದಲ್ಲಿ ಭಾನುವಾರ 12,000 ತಲುಪಿದ ದೈನಂದಿನ ಕೊರೊನಾ ಸೋಂಕು..!

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ ಹೊಸದಾಗಿ 12,000 ಕೊರೊನಾ ಸೋಂಕುಗಳು ದಾಖಲಾಗಿದೆ.
ಬೆಂಗಳೂರಲ್ಲಿ ಭಾನುವಾರ ಹೊಸದಾಗಿ 9,020 ಪ್ರಕರಣಗಳನ್ನು ದಾಖಲಿಸಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ 901 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 38,370ಕ್ಕೆ ಏರಿದೆ.

ರಾಜ್ಯದಲ್ಲಿ ಸಕಾರಾತ್ಮಕ 6.33% ಕ್ಕೆ ತಲುಪಿದೆ. ಮೃತಪಟ್ಟವರ ಪ್ರಮಾಣ 0.03% ಇದೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 29,63,957 ಮಂದಿ ಬಿಡುಗಡೆಗೊಂಡಿದ್ದಾರೆ. 49,602 ಸಕ್ರಿಯ ಪ್ರಕರಣಗಳಿವೆ. ಮೃತಪಟ್ಟಿದ್ದಾರೆ. 1,89,499 ಮಂದಿಗೆ ಇಂದು ಕೊರೊನಾ ಟೆಸ್ಟ್ ಮಾಡಲಾಗಿದೆ.

ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ -10, ಬಳ್ಳಾರಿ -107, ಬೆಳಗಾವಿ -105, ಬೆಂಗಳೂರು ಗ್ರಾಮಾಂತರ -98, ಬೆಂಗಳೂರು ನಗರ -9020, ಬೀದರ-20, ಚಾಮರಾಜನಗರ -26, ಚಿಕ್ಕಬಳ್ಳಾಪುರ -44, ಚಿಕ್ಕಮಗಳೂರು -78, ಚಿತ್ರದುರ್ಗ- 24, ದಕ್ಷಿಣ ಕನ್ನಡ -298, ದಾವಣಗೆರೆ -30, ಧಾರವಾಡ -147, ಗದಗ -7, ಹಾಸನ -182, ಹಾವೇರಿ -8, ಕಲಬುರಗಿ -98, ಕೊಡಗು -29, ಕೋಲಾರ -83, ಕೊಪ್ಪಳ -19, ಮಂಡ್ಯ -261, ಮೈಸೂರು -398, ರಾಯಚೂರು -7, ರಾಮನಗರ -20, ಶಿವಮೊಗ್ಗ -198, ತುಮಕೂರು -190, ಉಡುಪಿ -340, ಉತ್ತರ ಕನ್ನಡ -94, ವಿಜಯಪುರ -49 ಹಾಗೂ ಯಾದಗಿರಿ-10 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement