ಜಲಪಾತದಲ್ಲಿ ದೋಣಿಗಳ ಮೇಲೆ ಬಂಡೆ ಕುಸಿದು 7 ಸಾವು, 9 ಜನರಿಗೆ ಗಾಯ | ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ: ಶನಿವಾರ ಬ್ರೆಜಿಲ್‌ನ ಸುಲ್ ಮಿನಾಸ್‌ನಲ್ಲಿ ಜಲಪಾತದ ಕೆಳಗೆ ಪ್ರವಾಸಿಗರ ಮೋಟಾರ್‌ಬೋಟ್‌ಗಳ ಮೇಲೆ ಕಲ್ಲಿನ ಪದರ ಕುಸಿದು ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಮಿನಾಸ್ ಗೆರೈಸ್ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕ್ಯಾಪಿಟೋಲಿಯೊ ಕಣಿವೆಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ವೈರಲ್ ವಿಡಿಯೊಗಳು ಬಂಡೆಗಳ ಗೋಪುರವು ಮುರಿದು ತುಂಡಾಗಿ ಎರಡು ದೋಣಿಗಳ ಮೇಲೆ ಬಿದ್ದಿದೆ ಮತ್ತು ಸರೋವರದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದನ್ನು ತೋರಿಸಿದೆ.

https://twitter.com/otempo/status/1479848764940640258?ref_src=twsrc%5Etfw%7Ctwcamp%5Etweetembed%7Ctwterm%5E1479848764940640258%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fbrazil-sul-minas-rock-face-collapse-canyon-waterfall-boats-dead-injured-1897825-2022-01-09

ಈ ಘಟನೆಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಹಾಗೂ ಒಂಬತ್ತು ಮಂದಿಗಾಯಗೊಂಡಿದೆ. ಹಾಗೂ ಮೂವರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಗಾಯಾಳುಗಳನ್ನುಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಹಲವರ ಮೂಳೆ ಮುರಿತವಾಗಿದ್ದು, ತಲೆ ಮತ್ತು ಮುಖದ ಗಾಯಗಳೊಂದಿಗೆ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಕನಿಷ್ಠ 23 ಜನರಿಗೆ ಲಘು ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.
ಈ ಪ್ರದೇಶದಲ್ಲಿ ಎರಡು ವಾರಗಳಿಂದ ಭಾರೀ ಮಳೆಯಾಗಿದ್ದು, ಬಂಡೆಯ ಮುಖವನ್ನು ಸಡಿಲಗೊಳಿಸಬಹುದು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement