ಅಯ್ಯೋ ದೇವ್ರೆ..ಅಜ್ಜಿ ಪಕ್ಕ ಮಲಗಿದ್ದ ಮಗುವನ್ನು ಸದ್ದಿಲ್ಲದೆ ಎತ್ತಿಕೊಂಡು ಹೋಗಿ ನೀರಿನ ಟ್ಯಾಂಕ್​ನಲ್ಲಿ ಹಾಕಿದ ಕೋತಿಗಳು..!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ಮಗುವೊಂದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದ್ದು, ಕೋತಿಗಳು ಮಗುವನ್ನು ಎತ್ತಿಕೊಂಡು ಟೆರೇಸ್​ನ ಹೊರಭಾಗದಲ್ಲಿದ್ದ ನೀರಿನ ಟ್ಯಾಂಕ್​ನೊಳಗೆ ಹಾಕಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
2 ತಿಂಗಳ ಮಗು ಮನೆಯ ಟೆರೇಸ್‌ನಲ್ಲಿರುವ ಕೋಣೆಯಲ್ಲಿ ತನ್ನ ಅಜ್ಜಿಯ ಪಕ್ಕದಲ್ಲಿ ಮಲಗಿತ್ತು. ಗಾಳಿ ಬರಲೆಂದು ಅಜ್ಜಿ ಬಾಗಿಲು ತೆರೆದು, ಮೊಮ್ಮಗುವಿನೊಂದಿಗೆ ರೂಮಿನಲ್ಲಿ ಮಲಗಿದ್ದರು. ಆಗ ರೂಮಿನೊಳಗೆ ನುಗ್ಗಿದ ಕೋತಿಗಳು ಹಸುಗೂಸನ್ನು ಎತ್ತಿಕೊಂಡು ಟೆರೇಸ್​ನ ಹೊರಭಾಗದಲ್ಲಿದ್ದ ನೀರಿನ ಟ್ಯಾಂಕ್​ನೊಳಗೆ ಹಾಕಿದೆ. ಅಜ್ಜಿ ನಿದ್ರೆಯಿಂದ ಎದ್ದಾಗ ಮೊಮ್ಮಗು ಕಾಣೆಯಾಗಿರುವುದನ್ನು ಕಂಡು ಜೋರಾಗಿ ಕೂಗಿದರು. ಮೇಲೆ ಓಡಿ ಬಂದ ಮನೆಯವರು ಆ ಮಗು ಕಾಣದಿರುವುದನ್ನು ನೋಡಿ ಆತಂಕದಿಂದ ಸುತ್ತಲೂ ಹುಡುಕಾಡತೊಡಗಿದರು. 2 ತಿಂಗಳ ಮಗುವಾಗಿದ್ದರಿಂದ ಬೇರೆಲ್ಲೂ ಓಡಿಹೋಗಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಎಲ್ಲ ಕಡೆ ಹುಡುಕಾಡಿದ ನಂತರ ಟೆರೇಸ್​ನ ನೀರಿನ ತೊಟ್ಟಿಯಲ್ಲಿ ಮಗು ತೇಲುತ್ತಿರುವುದು ಪತ್ತೆಯಾಗಿದೆ.
ಈ ಪ್ರದೇಶಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೂ ಮೊದಲು ಕೂಡ ಸಾಕಷ್ಟು ಬಾರಿ ಕೋತಿಗಳು ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿದ್ದವು. ಮನೆಯೊಳಗಿನ ವಸ್ತುಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಬಿಸಾಡುತ್ತಿದ್ದವು. ಹಾಗೇ, ಹಿಂದೊಮ್ಮೆ ಮಗುವನ್ನು ತೆಗೆದುಕೊಂಡು ಹೋಗಲು ಕೂಡ ಪ್ರಯತ್ನಿಸಿದ್ದವು. ಆಗ ಎಚ್ಚೆತ್ತ ಪೋಷಕರು ಮಗುವನ್ನು ರಕ್ಷಣೆ ಮಾಡಿದ್ದರು. ಆದರೆ, ಈ ಬಾರಿ ಅಜ್ಜಿ ನಿದ್ರೆ ಮಾಡುತ್ತಿದ್ದಾಗ ಕೋತಿಗಳು ಮಗುವನ್ನು ಎತ್ತಿಕೊಂಡು ಹೋಗಿವೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement
ಓದಿರಿ :-   ಮನಿ ಮ್ಯಾಗ್ನೆಟ್, ಬಿಲಿಯನೇರ್‌ ಹೂಡಿಕೆದಾರ ರಾಕೇಶ್ ಜುಂಜುನ್​ವಾಲಾ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement