ಕರ್ನಾಟಕದಲ್ಲಿ ಸೋಮವಾರ ಹೊಸದಾಗಿ 11,698 ಕೊರೊನಾ ಸೋಂಕು, ಬೆಂಗಳೂರಲ್ಲಿ 146 ಓಮಿಕ್ರಾನ್‌ ಸೋಂಕು ದೃಢ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಇಂದು ಹೊಸದಾಗಿ 11,698 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದೇವೇಳೆ ಬೆಂಗಳೂರಿನಲ್ಲಿ 146 ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ.
ಆರೋಗ್ಯ ಇಲಾಖೆ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 4 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ, ಅದರಲ್ಲಿ ಇಬ್ಬರು ಬೆಂಗಳೂರಿನವರು. ರಾಜ್ಯಾದ್ಯಂತ ಇಂದು 1,148 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಈಗ 60,148 ಸಕ್ರಿಯ ಪ್ರಕರಣಗಳಿವೆ. ಕೋವಿಡ್‌ ಪಾಸಿಟಿವಿಟಿ ದರ ಶೇ.7.77ಕ್ಕೆ ಏರಿದೆ.
ರಾಜ್ಯದಲ್ಲಿ ಓಮಿಕ್ರಾನ್‌ ಪ್ರಕರಣಗಳ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌, ಬೆಂಗಳೂರಿನಲ್ಲಿ ಇಂದು 146 ಹೊಸ ಓಮಿಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಒಟ್ಟು ಓಮಿಕ್ರಾನ್‌ ಪೀಡಿತರ ಸಂಖ್ಯೆ 479ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾವಾರು ಸೋಂಕು..

ಬಾಗಲಕೋಟೆ 7, ಬಳ್ಳಾರಿ 93, ಬೆಳಗಾವಿ 129, ಬೆಂಗಳೂರು ಗ್ರಾಮಾಂತರ 143, ಬೆಂಗಳೂರು ನಗರ 9221, ಬೀದರ್ 37, ಚಾಮರಾಜನಗರ 40, ಚಿಕ್ಕಬಳ್ಳಾಪುರ 53, ಚಿಕ್ಕಮಗಳೂರು 43, ಚಿತ್ರದುರ್ಗ 27, ದಕ್ಷಿಣ ಕನ್ನಡ 176, ದಾವಣಗೆರೆ 22, ಧಾರವಾಡ 144, ಗದಗ 16, ಹಾಸನ 171, ಹಾವೇರಿ 0, ಕಲಬುರಗಿ 88, ಕೊಡಗು 23, ಕೋಲಾರ 65, ಕೊಪ್ಪಳ 7, ಮಂಡ್ಯ 306, ಮೈಸೂರು 309, ರಾಯಚೂರು 4, ರಾಮನಗರ 8, ಶಿವಮೊಗ್ಗ 75, ತುಮಕೂರು 139, ಉಡುಪಿ 219, ಉತ್ತರ ಕನ್ನಡ 100, ವಿಜಯಪುರ 28 ಹಾಗೂ ಯಾದಗಿರಿಯಲ್ಲಿ 5 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಓದಿರಿ :-   ಬ್ರಹ್ಮಾವರ: ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಯುವಕ-ಯುವತಿ ಶವ ಪತ್ತೆ-ಪೆಟ್ರೋಲ್‌‌‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ