ಬಿಹಾರ ಸಿಎಂ ನಿತೀಶಕುಮಾರಗೆ ಕೊರೊನಾ ಸೋಂಕು

ಬಿಹಾರ: ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ನಿತೀಶ ಅವರು ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಇಂದು ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.

advertisement

ಈ ಕುರಿತು ಮುಖ್ಯಮಂತ್ರಿಗಳ ಕಚೇರಿ(ಸಿಎಂಒ) ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಗೌರವಾನ್ವಿತ ಸಿಎಂ ನಿತೀಶಕುಮಾರ ಅವರ ಕೊರೊನಾ ಪರೀಕ್ಷೆಯು ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಯ ಪ್ರಕಾರ, ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ವೈರಸ್ ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ ಎಂದು ಬಿಹಾರದ ಸಿಎಂಒ ಟ್ವೀಟ್ ಮಾಡಿದೆ.

ಅಲ್ಲದೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಮನೆಯಲ್ಲೇ ಐಸೊಲೇಟ್ ಆಗಿದ್ದಾರೆ. ಇಂದು ರಾಜ್ಯದಲ್ಲಿ ಕೋವಿಡ್ ಜೊತೆಗೆ ಓಮಿಕ್ರಾನ್ ಸಹ ಹೆಚ್ಚಾಗಿದ್ದು, ಇದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಾಮಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಭಾರತದ ವಿಭಜನೆ ಕುರಿತಾದ ವೀಡಿಯೊ ಬಿಡುಗಡೆ ಮಾಡಿ ನೆಹರು ದೂಷಿಸಿದ ಬಿಜೆಪಿ: ತಿರುಗೇಟು ನೀಡಿದ ಕಾಂಗ್ರೆಸ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement