ಕರ್ನಾಟಕದಲ್ಲಿ ಬುಧವಾರ 21 ಸಾವಿರಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು, ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಳ..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಬುಧವಾರ (ಕಳೆದ 24 ಗಂಟೆ) 21,390 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇವೇಳೆ ರಾಜ್ಯದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಹಾಗೂ 1,541 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಪ್ರತಿ ಜಿಲ್ಲೆಗಳಲ್ಲೂ ಕೂಡ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ಇಂದು ಬೆಂಗಳೂರು ನಗರದಲ್ಲೇ ಹೊಸದಾಗಿ 15,617 ಸೋಂಕು ದಾಖಲಾಗಿದ್ದು, ಬೆಂಗಳೂರಿನಲ್ಲಿ 6 ಮಂದಿ ಸೇರಿ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 73 ಸಾವಿರ ಸಕ್ರಿಯ ಪ್ರಕರಣಗಳು ಸೇರಿ ರಾಜ್ಯದಲ್ಲಿ ಒಟ್ಟು 93,009 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ರೇಟ್ ಶೇ.10.96ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1,95,047 ಮಂದಿಯನ್ನು ಇಂದು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಜಿಲ್ಲಾವಾರು ಸೋಂಕಿನ ಮಾಹಿತಿ
ಬಾಗಲಕೋಟೆ 13, ಬಳ್ಳಾರಿ 180, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 310, ಬೆಂಗಳೂರು ನಗರ 15,617, ಬೀದರ್ 111, ಚಾಮರಾಜನಗರ 106, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 87, ಚಿತ್ರದುರ್ಗ 86, ದಕ್ಷಿಣ ಕನ್ನಡ 519, ದಾವಣಗೆರೆ 137, ಧಾರವಾಡ 264, ಗದಗ 43, ಹಾಸನ 409, ಹಾವೇರಿ 14, ಕಲಬುರಗಿ 188, ಕೊಡಗು 69, ಕೋಲಾರ 282, ಕೊಪ್ಪಳ 47, ಮಂಡ್ಯ 319, ಮೈಸೂರು 524, ರಾಯಚೂರು 91, ರಾಮನಗರ 135, ಶಿವಮೊಗ್ಗ 201, ತುಮಕೂರು 594, ಉಡುಪಿ 361, ಉತ್ತರ ಕನ್ನಡ 199, ವಿಜಯಪುರ 64 ಮತ್ತು ಯಾದಗಿರಿಯಲ್ಲಿ 10 ಸೋಂಕು ದಾಖಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement