ಬೆಂಗಳೂರು: ಅಪಾರ್ಟ್ಮೆಂಟ್ ಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಬೆಂಗಳೂರಿನ ಅಪಾರ್ಟ್ಮೆಂಟ್ ಹಾಗೂ ವಸತಿ ನಿಲಯಗಳು ಕೋವಿಡ್‌ ಹಾಟ್ ಸ್ಪಾಟ್ ಗಳಾಗಿ ಬದಲಾದ ಬೆನ್ನಲ್ಲೇ ಬಿಬಿಎಂಪಿ ಅಪಾರ್ಟ್ ಮೆಂಟ್ ಗಳಿಗಾಗಿ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್ ಡೌನ್ ಮಾಡಬೇಕು ಹಾಗೂ ಹತ್ತಕ್ಕಿಂತ ಹೆಚ್ಚು ಪ್ರಕಕರಣ ದಾಖಲಾದರೆ ಇಡೀ ಅಪಾರ್ಟ್‌ಮೆಂಟ್‌ ಸೀಲ್ಡೌನ್‌ ಮಾಡಬೇಕು ಎಂದು ಸೂಚಿಸಲಾಗಿದೆ. ಇದಲ್ಲದೆ, ಸೋಂಕು ಪತ್ತೆಯಾಗಿ ಕಂಟೋನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೋವಿಡ್‌ ಟೆಸ್ಟ್ ಮಡಬೇಕು. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ ಮತ್ತು ಎಲ್ಲ ಸಂದರ್ಶಕರಿಗೂ ಎರಡು ಡೋಸ್ ಆಗಿದ್ದರೆ ಮಾತ್ರ ಪ್ರವೇಶ ನೀಡಬೇಕು.ಎಲ್ಲ ನಿವಾಸಿಗಳಿಗೂ ಎರಡು ಡೋಸ್ ಲಸಿಕೆ ಆಗುವಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ನೋಡಿಕೊಳ್ಳಬೇಕು ಎಂದು ಬಿಬಿಎಂಪಿ ಆದೇಶಿಸಿದೆ.
ಅಲ್ಲದೆ, ಅಪಾರ್ಟ್‌ಮೆಂಟ್ ಗಳಸಾಮಾನ್ಯ ಪ್ರದೇಶವನ್ನು ಅಗಾಗ್ಗೆ ಸ್ಯಾನಿಟೈಸ್ ಮಾಡಬೇಕು, ಅಪಾರ್ಟ್‌ಮೆಂಟ್ ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು, ನಗರದ ಎಲ್ಲಾ ಅಪಾರ್ಟ್‌ಮೆಂಟ್ ಗಳಲ್ಲಿ ಟೆಂಪರೇಚರ್ ಚೆಕ್ ಮಾಡುವುದು‌ ಕಡ್ಡಾಯ, ಅಪಾರ್ಟ್‌ಮೆಂಟ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ 50 ಮಂದಿಗಷ್ಟೇ ಅವಕಾಶ, ಲಿಫ್ಟ್ ಗಳಲ್ಲಿನ ಬಟನ್ ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡಬೇಕು, ಸತತವಾಗಿ ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಆಗಾಗ್ಗೆ ಟೆಸ್ಟಿಂಗ್ ನಡೆಸಬೇಕು. ಹಾಗೂ ಒಂದು ಸೋಂಕು ಪತ್ತೆಯಾದರೆ ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್ ಡೌನ್ ಮಾಡಿ ಸ್ವಯಂ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ಕಂಟೋನ್ಮೆಂಟ್ ಝೋನ್ ಘೋಷಿಸಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement