ಸೈನಾ ನೆಹ್ವಾಲ್ ಟ್ವೀಟ್‌ಗೆ ಅಸಭ್ಯತೆಯ ಕಾಮೆಂಟ್ : ನಟ ಸಿದ್ಧಾರ್ಥ ಮೇಲೆ ಪ್ರಕರಣ ದಾಖಲು

ಹೈದರಾಬಾದ್‌: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಮಾಡಿದ ಅಸಭ್ಯತೆಯ ಕಾಮೆಂಟ್ ನಟ ಸಿದ್ಧಾರ್ಥ್ ಅವರನ್ನು ಕಾಡುತ್ತಲೇ ಇದೆ. ಇದೀಗ, ಬಿಜೆಪಿ ನಾಯಕರಾದ ನೀಲಂ ಭಾರ್ಗವ ರಾಮ್ ಮತ್ತು ಪ್ರೇರಣಾ ಟಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ನಟ ಸಿದ್ಧಾರ್ಥ್ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ.
ನಟನ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಕೊರತೆಯ ಕುರಿತು ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಅವರು ಬರೆದ ಟ್ವೀಟ್‌ಗೆ ಸಿದ್ಧಾರ್ಥ್ ಟೀಕೆಗೆ ಗುರಿಯಾಗುತ್ತಿದ್ದಾರೆ.
ಆದಾಗ್ಯೂ, ಸಿದ್ಧಾರ್ಥ್ ಅವರು ತಮ್ಮ “ಅಸಭ್ಯ ಹಾಸ್ಯ”ಕ್ಕಾಗಿ ಬುಧವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಕ್ಷಮೆಯಾಚನೆಯ ಪತ್ರದಲ್ಲಿ ಸಿದ್ಧಾರ್ಥ್ “ಪ್ರಿಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಬರೆದ ಜೋಕ್ ಬಗ್ಗೆ ಕ್ಷಮಿಸಿ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ನನ್ನ ಭೇಟಿಗೆ ಬರುವ ಜನರು ಆಧಾರ ಕಾರ್ಡ್‌ ತರಬೇಕು ಎಂದ ಸಂಸದೆ ಕಂಗನಾ ರಣಾವತ್‌ ; ಕಾಂಗ್ರೆಸ್‌ ಟೀಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement