ಲಕ್ನೋ (ಉತ್ತರ ಪ್ರದೇಶ): ವರ್ಚುವಲ್ ರ‍್ಯಾಲಿ ಎಂದು ಹೇಳಿ ನೂರಾರು ಮಂದಿ ಪಾಲ್ಗೊಂಡಿದ್ದರಿಂದ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ ಸಮಾಜವಾದಿ ಪಕ್ಷದ (ಎಸ್‌ಪಿ) 2,000 ಕ್ಕೂ ಹೆಚ್ಚು ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಲಕ್ನೋ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ತೆಗೆದುಕೊಂಡಿಲ್ಲ. ಆದರೆ, ಎಫ್‌ಐಆರ್‌ನಲ್ಲಿ ಯಾರೊಬ್ಬರ ಹೆಸರೂ ಇಲ್ಲ. “ನಾವು ವಿಷಯದ ಬಗ್ಗೆ ಗಮನಹರಿಸಿದ್ದೇವೆ; ಮಾದರಿ ನೀತಿ ಸಂಹಿತೆ ಮತ್ತು ಕೋವಿಡ್-19 ಪ್ರೋಟೋಕಾಲ್‌ಗಳ ಉಲ್ಲಂಘನೆ ಕಂಡುಬಂದಿದೆ. ನಾವು ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ” ಎಂದು ಲಕ್ನೋ ಜಿಲ್ಲಾಧಿಕಾರಿ ಅಭಿಷೇಕ್ ಪ್ರಕಾಶ್ ಹೇಳಿದ್ದಾರೆ.
ಸಮಾಜವಾದಿ ಪಕ್ಷವು ಇಂದು ಲಕ್ನೋದಲ್ಲಿ ವರ್ಚುವಲ್ ರ್ಯಾಲಿಯನ್ನು ನಡೆಸಿತು, ಆದಾಗ್ಯೂ, ನೂರಾರು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು COVID ಪ್ರೋಟೋಕಾಲ್ ಅನ್ನು ಉಲ್ಲಂಘಿಸಿ ಪಕ್ಷದ ಕಚೇರಿಯಲ್ಲಿ ಜಮಾಯಿಸಿದರು. ರ್ಯಾಲಿಯನ್ನು ಉದ್ದೇಶಿಸಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಬೆಂಬಲಿಗರೊಂದಿಗೆ ಇಂದು ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಪಿ ಪಕ್ಷದ ರಾಜ್ಯ ಮುಖ್ಯಸ್ಥ ನರೇಶ್ ಉತ್ತಮ್ ಪಟೇಲ್, ರ‍್ಯಾಲಿಯಲ್ಲಿ ಜನರು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು ಮತ್ತು ಬಿಜೆಪಿ ಸಚಿವರ ಮನೆ ಬಾಗಿಲಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಜನಸಮೂಹವನ್ನು ಕಾಣಬಹುದು ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಇದು ನಮ್ಮ ಪಕ್ಷದ ಕಚೇರಿಯೊಳಗೆ ನಡೆದಿದೆ. ನಾವು ಯಾರನ್ನೂ ಕರೆಯಲಿಲ್ಲ, ಆದರೆ ಜನರು ಬಂದರು. ಜನರು ಕೋವಿಡ್ ಪ್ರೋಟೋಕಾಲ್‌ಗಳಿಗೆ ಬದ್ಧರಾಗಿನಡೆದುಕೊಂಡಿದ್ದಾರೆ. ಬಿಜೆಪಿ ಮಂತ್ರಿಗಳ ಮನೆ ಮತ್ತು ಮಾರುಕಟ್ಟೆಗಳಲ್ಲಿ ಜನಸಂದಣಿ ಕೂಡ ಇತ್ತು, ಆದರೆ ಅವರಿಗೆ ನಮ್ಮೊಂದಿಗೆ ಸಮಸ್ಯೆ ಇದೆ ಎಂದು ಪಟೇಲ್ ಹೇಳಿದರು.
ವರ್ಚುವಲ್ ರ್ಯಾಲಿಯ ನಂತರ, ಲಕ್ನೋ ಪೊಲೀಸರ ತಂಡವು ಪಕ್ಷದ ಕಚೇರಿಗೆ ಭೇಟಿ ನೀಡಿ ಕೋವಿಡ್ ಪ್ರೋಟೋಕಾಲ್‌ಗಳ ಉಲ್ಲಂಘನೆಯ ಜೊತೆಗೆ ಭಾರತದ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಹೊಸ ಓಮಿಕ್ರಾನ್ ರೂಪಾಂತರದಿಂದಾಗಿ ಕೋವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ಭಾರತೀಯ ಚುನಾವಣಾ ಆಯೋಗವು (ಇಸಿಐ) ರಾಜಕೀಯ ಪಕ್ಷಗಳನ್ನು ಜನವರಿ 14 ರ ವರೆಗೆ ಬಹಿರಂಗ ಪ್ರಚಾರ, ಸಮಾವೇಶ ಹಾಗೂ ಪಾದಯಾತ್ರೆಯನ್ನು ನಿಷೇಧಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ