ಕಲಬುರಗಿ: ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ಲಿಂಗೈಕ್ಯ

ಕಲಬುರಗಿ: ಕಮಲಾಪುರ ತಾಲೂಕಿನ ಮಹಾಗಾಂವದ ಪ್ರಸಿದ್ದ ಕಳ್ಳಿಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯರು (58) ಸಂಕ್ರಾಂತಿ ಹಬ್ಬದ ಅಂಗವಾಗಿ ನದಿಯಲ್ಲಿ ಈಜಾಡಿ ಸ್ನಾನ ಮಾಡಿ ನದಿಯಿಂದ ಹೊರಬಂದ ನಂತರ ಹೃದಯಾಘಾತಕ್ಕೆ ಒಳಗಾಗಿ ಲಿಂಗೈಕ್ಯರಾಗಿದ್ದಾರೆ.
ಸಂಕ್ರಾಂತಿ ಹಬ್ಬದಂಗವಾಗಿ ಶಹಾಬಾದ ತಾಲೂಕಿನ ಸುಕ್ಷೇತ್ರ ಹೊನಗುಂಟಾ ಬಳಿಯ ಭೀಮಾನದಿಯಲ್ಲಿ ಸ್ವಲ್ಪ ಈಜಾಡಿ ಸ್ನಾನ ಮಾಡಲು ಹೋಗಿದ್ದರು. ಸ್ವಲ್ಪ ಹೊತ್ತು ಈಜಾಡಿ ಬಂದ ನಂತರ ಹೃದಯಾಘಾತಕ್ಕೆ ಒಳಗಾಗಿ ಅಪಾರ ಭಕ್ತರನ್ನು ಅಗಲಿದ್ದಾರೆ.
ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಸಮಾಜವನ್ನು ಮುನ್ನೆಡೆಸುತ್ತಿದ್ದ ಶಿವಾಚಾರ್ಯರು ಸಾಹಿತ್ಯದಲ್ಲೂ ಉತ್ತಮ ಕೃಷಿ ಮಾಡಿದವರು. ಮಠದಡಿ ಉತ್ತಮ ಶಿಕ್ಷಣ ಸಂಸ್ಥೆ ಮುನ್ನೆಡೆಸುತ್ತಿದ್ದರು. ವೇದಿಕೆ ಮೇಲೆಯೇ ಸ್ವರಚಿತ ಕವನ ರಚಿಸುತ್ತಿದ್ದರು.
ರಡು ವಾರಗಳ ಹಿಂದೆ ಮಠದ ಹಿಂದಿನ ಪೀಠಾಧಿಪತಿ ಲಿಂ. ವಿರೂಪಾಕ್ಷಯ್ಯ ಶಿವಾಚಾರ್ಯ ರ 42ನೇ ಪುಣ್ಯ ಸ್ಮರಣೋತ್ಸವ ಆಚರಿಸಿ ಐವರು ಸಾಧಕರಿಗೆ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಪೂಜ್ಯರ ಶಿವೈಕ್ಯ ವಿಷಯ ಕೇಳಿ ಮಹಾಗಾಂವ ಕಳ್ಳಿಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಪೂಜ್ಯರ ದಿಢೀರ್ ಅಗಲುವಿಕೆಯಿಂದ ಭಕ್ತಕೋಟಿ ಶೋಕ ಸಾಗರ ದಲ್ಲಿ ಮುಳುಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ 400 ಪಶುವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಜೂನ್‌ 24 ಕೊನೆಯ ದಿನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement