ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಲಕ್ಕಲ್ ಖುಲಾಸೆ

ತಿರುವನಂಪುರಂ: ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಕೇರಳ ನ್ಯಾಯಾಲಯ ಖುಲಾಸೆಗೊಳಿಸಿದೆ.
2014 ರಿಂದ 2016ರ ನಡುವೆ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದರು ಎಂದು ಸನ್ಯಾಸಿನಿಯೊಬ್ಬರು ಆರೋಪಿಸಿದ್ದರು. ಮಿಷನರೀಸ್ ಆಫ್ ಜೀಸಸ್ ಆರ್ಡರ್‌ನ ಮುಖ್ಯಸ್ಥರಾಗಿದ್ದಾಗ ಬಿಷಪ್ ಫ್ರಾಂಕೋ ಅವರು 2014 ಮತ್ತು 2016 ರ ನಡುವೆ ಪದೇ ಪದೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 2018 ರಲ್ಲಿ ಜಲಂಧರ್ ಡಯಾಸಿಸ್ ಅಡಿಯಲ್ಲಿನ ಮಿಷನರೀಸ್ ಆಫ್ ಜೀಸಸ್ ಸಭೆಯ ಸನ್ಯಾಸಿನಿ ಆರೋಪಿಸಿದ್ದರು. ಆದರೆ ಬಿಷಪ್ ಫ್ರಾಂಕೋ ನಿರಾಕರಿಸಿದ್ದರು. ನಂತರ ಮುಲಕ್ಕಲ್ ಮೇಲೆ ಅತ್ಯಾಚಾರ, ಬೆದರಿಕೆ ಮತ್ತು ಬಲವಂತದ ಬಂಧನ ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಲಾಗಿತ್ತು. 100 ದಿನಕ್ಕೂ ಹೆಚ್ಚು ದಿನಗಳ ಕಾಲ ನಡೆದ ವಿಚಾರಣೆಯ ಬಳಿಕ ಕೊಟ್ಟಾಯಂನ ನ್ಯಾಯಾಲಯ ಎಲ್ಲ ಆರೋಪಗಳಿಂದಲೂ ಫ್ರಾಂಕೋ ಮುಲಕ್ಕಲ್ ಅವರನ್ನು ಖುಲಾಸೆಗೊಳಿಸಿದೆ.

ದೂರು ದಾಖಲಾದ ಸುಮಾರು ಒಂದು ವರ್ಷದ ಬಳಿಕ, ಕ್ರೈಸ್ತ ಸನ್ಯಾಸಿನಿಯರ ಪ್ರತಿಭಟನೆಯ ಒತ್ತಡಕ್ಕೆ ಮಣಿದು ಫ್ರಾಂಕೋ ಅವರನ್ನು ಅತ್ಯಾಚಾರ, ಅಕ್ರಮ ಬಂಧನ ಹಾಗೂ ಅಪರಾಧ ಬೆದರಿಕೆ ಮುಂತಾದ ಆರೋಪಗಳ ಅಡಿ ಬಂಧಿಸಲಾಗಿತ್ತು.
ಮೂರು ದಿನಗಳ ವಿಚಾರಣೆ ಬಳಿಕ ಮುಲಕ್ಕಲ್ ಅವರನ್ನು ಬಂಧಿಸಲಾಗಿತ್ತು. ಈಗ ಅವರನ್ನು ಆರೋಪ ಮುಕ್ತಗೊಳಿಸಿರುವ ನ್ಯಾಯಾಲಯದ ತೀರ್ಪಿನ ಬಗ್ಗೆ ಕೊಟ್ಟಾಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್. ಹರಿ ಶಂಕರ್ ಅವರು, ಈ ಪ್ರಕರಣದಲ್ಲಿ ಮುಲಕ್ಕಲ್ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದವು. ಯಾವುದೇ ಸಾಕ್ಷಿದಾರ ವಿರುದ್ಧ ಹೇಳಿಕೆ ನೀಡಿರಲಿಲ್ಲ. ಆದರೂ ಕೋರ್ಟ್ ಅವರನ್ನು ಖುಲಾಸೆಗೊಳಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.
ದೇವರನ್ನು ಸ್ತುತಿಸಿ’ ಎಂದು ತೀರ್ಪಿನ ಬಳಿಕ ಕೋರ್ಟ್ ಆವರಣದಿಂದ ನಿರ್ಗಮಿಸುವ ಮುನ್ನ ಮುಲಕ್ಕಲ್ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ತೀರ್ಪು ಪ್ರಕಟವಾದ ಬಳಿಕ ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಅವರು, ತಮ್ಮ ವಕೀಲರನ್ನು ಅಪ್ಪಿಕೊಂಡು ಧನ್ಯವಾದ ಸಲ್ಲಿಸಿದರು.
2014ರ ಮೇ 5ರಿಂದ ಎರಡು ವರ್ಷಗಳ ಅವಧಿಯಲ್ಲಿ 13 ಬಾರಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಮುಲಕ್ಕಲ್ ಅವರನ್ನು ಬಂಧಿಸಿ 25 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಳ್ಳಲಾಗಿತ್ತು. ಈ ಆರೋಪವನ್ನು ನಿರಾಕರಿಸಿದ್ದ ಮುಲಕ್ಕಲ್, ಇದು ಕಟ್ಟು ಕಥೆ ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಅಮೆರಿಕ ಕಾರು ಕಂಪನಿ ಫೋರ್ಡ್ ಅವಮಾನಿಸಿದ ನಂತರ ʼರತನ್ ಟಾಟಾʼ ಜಾಗ್ವಾರ್-ಲ್ಯಾಂಡ್ ರೋವರ್ ಖರೀದಿಸಿದ್ದೇ ರೋಚಕ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement