2021ನೇ ವರ್ಷ ಭಾರತದಲ್ಲಿ 1901ರಿಂದ ಐದನೇ ಅತ್ಯಂತ ಬೆಚ್ಚಗಿನ ವರ್ಷ: ಐಎಂಡಿ

ನವದೆಹಲಿ: 2021ರ ವರ್ಷವು 1901 ರಿಂದ ಭಾರತದಲ್ಲಿ ಐದನೇ ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ದೇಶದಲ್ಲಿ ತನ್ನ ವಾರ್ಷಿಕ ಸರಾಸರಿ ಗಾಳಿಯ ಸಾಮಾನ್ಯ ಉಷ್ಣತೆಗಿಂತ 0.44 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ತಿಳಿಸಿದೆ.

ಪ್ರವಾಹ, ಚಂಡಮಾರುತ, ಭಾರೀ ಮಳೆ, ಭೂಕುಸಿತ, ಸಿಡಿಲು ಮುಂತಾದ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ 1,750 ಸಾವುಗಳು ಸಂಭವಿಸಿವೆ ಎಂದು ಅದು ಹೇಳಿದೆ.
1901ರಿಂದ 2016, 2009, 2017, 2010ರ ನಂತರ 2021 ಐದನೇ ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ದೇಶದ ವಾರ್ಷಿಕ ಸರಾಸರಿ ಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.44 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ದಾಖಲಾಗಿದೆ” ಎಂದು ಹವಾಮಾನ ಇಲಾಖೆಯ ವಾರ್ಷಿಕ ಹೇಳಿಕೆ ತಿಳಿಸಿದೆ. ಚಳಿಗಾಲದಲ್ಲಿ ಮತ್ತು ಮಾನ್ಸೂನ್ ನಂತರದ ಋತುವಿನಲ್ಲಿ ತಾಪಮಾನವು ಮುಖ್ಯವಾಗಿ ಇದಕ್ಕೆ ಕೊಡುಗೆ ನೀಡಿದೆ ಎಂದು ಅದು ಹೇಳಿದೆ.
2016 ರಲ್ಲಿ, ದೇಶದ ವಾರ್ಷಿಕ ಸರಾಸರಿ ಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.710 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು. ಇದು 2009 ಮತ್ತು 2017 ರಲ್ಲಿ ಸರಾಸರಿ ತಾಪಮಾನಕ್ಕಿಂತ ಕ್ರಮವಾಗಿ 0.550 ಡಿಗ್ರಿ ಸೆಲ್ಸಿಯಸ್ ಮತ್ತು 0.541 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು. 2010 ರಲ್ಲಿ, ವಾರ್ಷಿಕ ಸರಾಸರಿ ಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.539 ಡಿಗ್ರಿ ಸೆಲ್ಸಿಯಸ್ ಹೆಚ್ಚಿತ್ತು ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

2021ರಲ್ಲಿ ಭಾರತದಲ್ಲಿ ಗುಡುಗು ಮತ್ತು ಮಿಂಚಿನಿಂದಾಗಿ 787 ಜನರು ಮೃತಪಟ್ಟಿದ್ದಾರೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ, ಆದರೆ ಆ ವರ್ಷ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಘಟನೆಗಳಲ್ಲಿ 759 ಜನರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.
ಸೈಕ್ಲೋನಿಕ್ ಚಂಡಮಾರುತಗಳಿಂದ 172 ಜನ ಮೃತಪಟ್ಟಿದ್ದಾರೆ ಮತ್ತು ಇತರ ಹವಾಮಾನ ವೈಪರೀತ್ಯಗಳಿಂದ 32 ಜನರು ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ.
ಏತನ್ಮಧ್ಯೆ, 2021 ರಲ್ಲಿ ಭೂಮಿಯ ಜಾಗತಿಕ ಸರಾಸರಿ ಮೇಲ್ಮೈ ತಾಪಮಾನವು 2018ರ ದಾಖಲೆಗೆ ಸಮನಾಗಿದೆ ಮತ್ತು ಇದು ಆರನೇ ಬೆಚ್ಚನೆಯ ವರ್ಷವಾಗಿದೆ ಮತ್ತು ಕಳೆದ ಎಂಟು ವರ್ಷಗಳು ಬೆಚ್ಚಗಿವೆ ಎಂದು ಅಮೆರಿಕದ ನಾಸಾ (NASA) ಮತ್ತು ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ (NOAA), ನಡೆಸಿದ ಸ್ವತಂತ್ರ ವಿಶ್ಲೇಷಣೆ ತಿಳಿಸಿದೆ.
ಗ್ರಹದ ದೀರ್ಘಕಾಲೀನ ತಾಪಮಾನ ಏರಿಕೆಯ ಪ್ರವೃತ್ತಿಯನ್ನು ಮುಂದುವರೆಸುತ್ತಾ, 2021 ರಲ್ಲಿ ಜಾಗತಿಕ ತಾಪಮಾನವು ನಾಸಾದ (NASA) ದ ಬೇಸ್‌ಲೈನ್ ಅವಧಿಗೆ ಸರಾಸರಿಗಿಂತ 0.85 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿತ್ತು ಎಂದು ನ್ಯೂಯಾರ್ಕ್‌ನ ನಾಸಾದ ಗೊಡ್ಡಾರ್ಡ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಸ್ಟಡೀಸ್ (GISS) ವಿಜ್ಞಾನಿಗಳು ಹೇಳಿದ್ದಾರೆ. ಕಾಲಾನಂತರದಲ್ಲಿ ಜಾಗತಿಕ ತಾಪಮಾನವು ಹೇಗೆ ಬದಲಾಗುತ್ತದೆ ಎಂಬುದನ್ನು ನೋಡಲು ನಾಸಾ 1951-1980 ರ ಅವಧಿಯನ್ನು ಬೇಸ್‌ಲೈನ್‌ನಂತೆ ಬಳಸುತ್ತದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement