ತುರ್ತು ಚಿಕಿತ್ಸೆ ಅಗತ್ಯವಿಲ್ಲದಿದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡಬೇಡಿ:ಸರ್ಕಾರ

posted in: ರಾಜ್ಯ | 0

ಬೆಂಗಳೂರು : ಆಸ್ಪತ್ರೆಗೆ ದಾಖಲಾಗಲು ರಾಜ್ಯ ಸರ್ಕಾರ ಮತ್ತೊಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಶನಿವಾರ 32,793 ಜನರಿಗೆ ಹೊಸದಾಗಿ ಸೋಂಕು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನರಿಗೆ ಆಸ್ಪತ್ರೆಗೆ ದಾಖಲಾಗಲು ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.
ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೇ ಆಸ್ಪತ್ರೆಗಳಿಗೆ ತೆರಳಬೇಕು. ಇಲ್ಲದಿದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಆದೇಶ ನೀಡಲಾಗಿದ್ದು, ಮುಂದಿನ 2 ವಾರದ ವರೆಗೆ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಹೊರರೋಗಿಗಳ ವಿಭಾಗಕ್ಕೆ ಬರುವವರು, ಹಲ್ಲಿನ ತೊಂದರೆಗೆ ಬರುವವರು, ಇತ್ಯಾದಿ ಸಮಸ್ಯೆಗಳಿದ್ದರೆ ಆಸ್ಪತ್ರೆಗಳಿಗೆ ಬರಬೇಕಾಗಿಲ್ಲ ಎಂದು ಹೇಳಿದೆ. ಹೊರರೋಗಿ ವಿಭಾಗಕ್ಕೆ ಬರುವವರಲ್ಲಿ ಹೆಚ್ಚು ಸೋಂಕು ಪತ್ತೆ ಆಗುತ್ತಿದೆ. ಹೀಗಾಗಿ ತೀವ್ರ ರೋಗಗಳು ಹಾಗು ತುರ್ತು ಅಗತ್ಯವಿದ್ದವರು ಆಸ್ಪತ್ರೆಗೆ ತೆರಳಲು ಸರ್ಕಾರ ಮನವಿ ಮಾಡಿದೆ. ಹೊರರೋಗಿಗಳು, ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವವರು, ಹಲ್ಲಿನ ಚಿಕಿತ್ಸೆ ಪಡೆಯುವವರು ಸೇರಿದಂತೆ ಇನ್ನಿತರ ರೋಗಿಗಳು ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಬರುವುದನ್ನು ಮುಂದೂಡಿ ಎಂದು ಸರ್ಕಾರ ತಿಳಿಸಿದೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ