ಕರ್ನಾಟಕದಲ್ಲಿ ಭಾನುವಾರ 34 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, 3 ಜಿಲ್ಲೆಗಳಲ್ಲಿ ಸಾವಿರ ದಾಟಿದ ಪ್ರಕರಣ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ತಾಜಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ.
ರಾಜ್ಯದಲ್ಲಿ ಇಂದು, ಭಾನುವಾರ ಒಟ್ಟು 34,047 ಪ್ರಕರಣಗಳು ದಾಖಲಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 5,902 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದ ಸಕಾರಾತ್ಮಕ ದರ 19.29%ಕ್ಕೆ ಏರಿದೆ. ಬೆಂಗಳೂರಿನಲ್ಲಿ 21,071 ಪ್ರಕರಣ ದಾಖಲಾಗಿದೆ.
ಎಲ್ಲ ಜಿಲ್ಲೆಗಳಲ್ಲಿಯೂ ಸೋಂಕಿನಲ್ಲಿ ಹೆಚ್ಚಳವಾಗುತ್ತಿದ್ದು, ಮೈಸೂರು, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕು 32,20,087ಕ್ಕೆ ಏರಿದೆ. 39,83,645 ಮಂದಿ ಈವರೆಗೆ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.03 ರಷ್ಟಿದೆ. ಬೆಂಗಳೂರಿನಲ್ಲಿ ಒಟ್ಟು 21,071 ಪಾಸಿಟಿವ್ ಪ್ರಕರಣ ದಾಖಲಾಗಿದ್ದರೆ ಇದೇವೇಳೆ 3,978 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 5 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು 1,76,470 ಸ್ಯಾಂಪಲ್‌ಗಳನ್ನು ಕೊರೊನಾ ಪರೀಕ್ಷೆಗೆ ಮಾಡಲಾಗಿದೆ.

ಜಿಲ್ಲಾವಾರು ಮಾಹಿತಿ:
ಬಾಗಲಕೋಟೆ -136, ಬಳ್ಳಾರಿ -566, ಬೆಳಗಾವಿ -468, ಬೆಂಗಳೂರು ಗ್ರಾಮಾಂತರ -722, ಬೆಂಗಳೂರು ನಗರ -21,071, ಬೀದರ್ -178, ಚಾಮರಾಜನಗರ -146, ಚಿಕ್ಕಬಳ್ಳಾಪುರ -287, ಚಿಕ್ಕಮಗಳೂರು -135, ಚಿತ್ರದುರ್ಗ -184, ದಕ್ಷಿಣ ಕನ್ನಡ -782, ದಾವಣಗೆರೆ -244, ಧಾರವಾಡ -634, ಗದಗ -117, ಹಾಸನ -1,171, ಹಾವೇರಿ -55, ಕಲಬುರಗಿ -562, ಕೊಡಗು -148, ಕೋಲಾರ -552, ಕೊಪ್ಪಳ -80, ಮಂಡ್ಯ -709, ಮೈಸೂರು -1,892, ರಾಯಚೂರು -143, ರಾಮನಗರ -231, ಶಿವಮೊಗ್ಗ -287, ತುಮಕೂರು- 1,373, ಉಡುಪಿ -591, ಉತ್ತರ ಕನ್ನಡ -447, ವಿಜಯಪುರ -103 ಮತ್ತು ಯಾದಗಿರಿಯಲ್ಲಿ -33 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement