ಅಂಕೋಲಾ: ಜನರೇ ಸ್ಮಶಾನ ಸ್ವಚ್ಛಗೊಳಿಸಿದರು..!

ಅಂಕೋಲಾ : ಇಲ್ಲಿಯ ತೆಂಕಣಕೇರಿಯ ಹಿಂದೂ ಸ್ಮಶಾನವನ್ನು ಭಾನುವಾರ ಊರ ಜನರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ.
ಹೊಳೆಯ ಅಂಚಿನಲ್ಲಿರುವ ಈ ಸ್ಮಶಾನ ಭೂಮಿಯಲ್ಲಿ ಗಿಡಗಂಟಿಗಳು ಬೆಳೆದಿದ್ದವು. ಕೆಲವರು ಮಣ್ಣು ಕಸಕಡ್ಡಿ ತಂದು ಎಸೆದ ಕಾರಣ ಅಸಹ್ಯ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದಾಗಿ ಶವ ಸಂಸ್ಕಾರಕ್ಕೆ ಬಂದವರು ಕಿರಿಕಿರಿ ಅನುಭವಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಎಲ್ಲ ಗಿಡಗಂಟಿ, ಮುಳ್ಳು ತೆಗೆದು , ಪರಿಸರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಸ ಎಲ್ಲ ತೆಗೆದು ಸ್ವಚ್ಛಗೊಳಿಸಿದ್ದಾರೆ. ಜೆಸಿಬಿ ಮೂಲಕ ನೆಲ ಸಮತಟ್ಟುಗೊಳಿಸಲಾಯಿತು.
ಪ್ರಮುಖ ಸುಧೀರ ನಾಯ್ಕ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯ ಜಯಂತ ನಾಯ್ಕ, ಪ್ರಮುಖರಾದ ಚಂದ್ರಕಾಂತ ನಾಯ್ಕ, ಗಜು ನಾಯ್ಕ, ವಿಠ್ಠಲ ನಾಯ್ಕ, ಗಣೇಶ ನಾಯ್ಕ, ರಾಜೇಶ ಮಿತ್ರಾ ನಾಯ್ಕ, ರಾಮಕೃಷ್ಣ ನಾಯ್ಕ, ವಿಠ್ಠಲದಾಸ ಕಾಮತ್, ಸಂತೋಷ ನಾಯ್ಕ, ರಮೇಶ ಆಚಾರಿ, ಮಾಣಿ ನಾಯ್ಕ, ಜಟ್ಟಿ ನಾಯ್ಕ, ನಾಗರಾಜ ಆಚಾರಿ,ನಾಗೇಂದ್ರ ನಾಯ್ಕ ಅರವಿಂದ ನಾಯ್ಕ ಮತ್ತಿತರರಿದ್ದರು. ಉಪನಾಡವ ಸಂಘದ ಅಧ್ಯಕ್ಷ ಪ್ರದೀಪ ಬಿ. ನಾಯ್ಕ ಜೆಸಿಬಿ ಒದಗಿಸಿ ಸಹಕರಿಸಿದರು.
ಸೌಲಭ್ಯ ಒದಗಿಸಿ:
ಸ್ಮಶಾನದಲ್ಲಿ ಶವ ದಹನಕ್ಕೆ ಬರುವವರಿಗೆ ಅಗತ್ಯವಿರುವ ನೀರು, ವಿದ್ಯುತ್ ದೀಪ, ಆಸನ ವ್ಯವಸ್ಥೆ ಒದಗಿಸುವಂತೆ ತೆಂಕಣಕೇರಿ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement