ಕರ್ನಾಟಕದಲ್ಲಿ ಒಂದೇ ದಿನ 287 ಜನರಿಗೆ ಓಮಿಕ್ರಾನ್‌ ಸೋಂಕು ದೃಢ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ರೂಪಾಂತರಿ ಓಮಿಕ್ರಾನ್ ಸೋಮವಾರ 287 ಜನರಲ್ಲಿ ಕಾಣಿಸಿಕೊಂಡಿದ್ದು ಈವರೆಗೆ ಒಂದೇ ದಿನ ಅತಿ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಓಮಿಕ್ರಾನ್ ಸೋಂಕು ಸಂಖ್ಯೆ 766 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.‌ಸುಧಾಕರ್ ತಿಳಿಸಿದ್ದಾರೆ‌
ಈ ಕುರಿತು ಟ್ವೀಟ್ ಮಾಡಿರುವ ಅವರು 287 ಜನರಿಗೆ ಓಮಿಕ್ರಾನ್ ಸೋಂಕು ಬೆಂಗಳೂರಿನಲ್ಲಿ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ‌.
ದೇಶದ ವಿವಿಧ ರಾಜ್ಯಗಳಲ್ಲಿ ಓಮಿಕ್ರಾನ್ ರೂಂಪತರಿ ಸೋಂಕು ಹೆಚ್ಚಳವಾಗುತ್ತಿದ್ದು ದೇಶದಲ್ಲಿ 8500 ಗಡಿ ದಾಟಿದೆ ಅದರಲ್ಲಿಯೂ ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಸೋಂಕು ದಾಖಲಾಗಿದೆ.
ದೇಶದಲ್ಲಿ ಇದುವರೆಗೆ 29 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಜೊತೆಗೆ ಕೊರೊನಾ ಸೋಂಕು ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ ಸೋಂಕು ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಇಂಧನ ತೆರಿಗೆ ಮತ್ತಷ್ಟು ಕಡಿತಗೊಳಿಸುವುದನ್ನು ನಾವು ಪರಿಗಣಿಸ್ತೇವೆ: ಸಿಎಂ ಬೊಮ್ಮಾಯಿ
advertisement

ನಿಮ್ಮ ಕಾಮೆಂಟ್ ಬರೆಯಿರಿ