ಆಘಾತಕಾರಿ ಘಟನೆ: ಪ್ರಾಣಿಬಲಿ ಕೊಡುವ ವೇಳೆ ಮೇಕೆ ಬದಲು ಮನುಷ್ಯನನ್ನೇ ಕತ್ತರಿಸಿದ ಕುಡುಕ..!

ಅಮರಾವತಿ (ಆಂಧ್ರಪ್ರದೇಶ): ಕುಡಿತದ ಅಮಲಿನಲ್ಲಿ ಬಲಿಕೊಡಬೇಕಿದ್ದ ಮೇಕೆಯ ಬದಲು ಮತ್ತೊಬ್ಬ ವ್ಯಕ್ತಿಯ ಕತ್ತು ಕೊಯ್ದಿರುವ ಆಘಾತಕಾರಿ ಘಟನೆ ನಡೆದಿದೆ.ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ ಸಂಕ್ರಾಂತಿ ಆಚರಣೆ ವೇಳೆ ಈ ಘಟನೆ ನಡೆದಿದೆ.
ಪೋಲೀಸರ ಪ್ರಕಾರ, ಅಮಲೇರಿದ ಸ್ಥಿತಿಯಲ್ಲಿದ್ದ ಚಲಪತಿ ಎಂಬಾತ ಮೇಕೆಯನ್ನು ಕಡಿಯುವ ಬದಲು ಮೇಕೆಯನ್ನು ಹಿಡಿದಿದ್ದ ವ್ಯಕ್ತಿಯೊಬ್ಬನನ್ನು ಹಿಡಿದಿದ್ದ ವ್ಯಕ್ತಿಯೊಬ್ಬನ ಕುತ್ತಿಗೆಯನ್ನು ಕತ್ತರಿಸಿದ್ದಾನೆ.ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸುರೇಶ (35) ಅವರನ್ನು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಷ್ಟರಲ್ಲಾಗಲೇ ಅಲ್ಲಿ ಅವರು ಮೃತಪಟ್ಟಿದ್ದರು.
ಮದನಪಲ್ಲಿ ಗ್ರಾಮಾಂತರ ಮಂಡಲದ ವಲಸಪಲ್ಲಿಯಲ್ಲಿ ಸಂಪ್ರದಾಯದ ಅಂಗವಾಗಿ ಜನರ ಗುಂಪೊಂದು ಪ್ರಾಣಿ ಬಲಿ ಕೊಡುತ್ತಿದ್ದಾಗ ಈ ಘಟನೆ ನಡೆದಿದೆ.
ಗ್ರಾಮದ ಜನರು ಪ್ರತಿ ವರ್ಷ ಸಂಕ್ರಾಂತಿ ಆಚರಣೆಯ ಸಂದರ್ಭದಲ್ಲಿ ಪ್ರಾಣಿಗಳನ್ನು ಬಲಿ ನೀಡಿ ಸ್ಥಳೀಯ ಯೆಲ್ಲಮ್ಮ ದೇವಸ್ಥಾನದಲ್ಲಿ ಅರ್ಪಿಸುತ್ತಾರೆ.
ಪಾನಮತ್ತನಾಗಿದ್ದ ಚಲಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

advertisement

ನಿಮ್ಮ ಕಾಮೆಂಟ್ ಬರೆಯಿರಿ