ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದ ಸರ್ಕಾರ

ಬೆಂಗಳೂರು: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಿ ಆದೇಶಿಸಿದೆ.
ಕಳೆದ ಆಗಸ್ಟ್ 25 ರಂದು ಸೆಕೆಂಡರಿ ಅಗ್ರಿಕಲ್ಚರ್ ಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಕೃಷಿ ಸಚಿವ ಬಿ.ಸಿ.ಪಾಟೀಲ ಕೇಂದ್ರದ ಆದಾಯ ದ್ವಿಗುಣಗೊಳಿಸುವ ಸಮಿತಿಯ ಮುಖ್ಯಸ್ಥರೊಂದಿಗೆ ಸಮಿತಿ ಸಭೆ ನಡೆಸಿದ್ದು, ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಸರ್ಕಾರ ಕೃಷಿ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ 13 ಜನರ ಸದಸ್ಯರನ್ನೊಳಗೊಂಡ ಸಮಿತಿ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಾನಲಯ ಸ್ಥಾಪಿಸಿ ಆದೇಶಿಸಿದೆ.
ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಸೂಕ್ತ ಬ್ಯ್ರಾಂಡ್ ಮೂಲಕ ಮಾರುಕಟ್ಟೆ ಕಲ್ಪಿಸುವುದು ಸೆಕೆಂಡರಿ ಅಗ್ರಿಕಲ್ಚರ್‌ನ ಮುಖ್ಯ ಧ್ಯೇಯೋದ್ದೇಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಗುಡಿ ಕೈಗಾರಿಕೆ ಎಂದು ಪರಿಗಣಿಸಬಹುದಾದ ಚಟುವಟಿಕೆಯು ಸ್ಥಳೀಯ ಮತ್ತು ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಪ್ರಮಾಣದಲ್ಲಿ ಇರುವುದು ಸೆಕೆಂಡರಿ ಕೃಷಿಯಾಗಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ಕಚ್ಚಾ ವಸ್ತುವು ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಸಂಸ್ಕರಣೆಗೆ ಒಳಗಾಗಿದ್ದರೆ ಮತ್ತು ಅಂತಹ ಕಚ್ಚಾವಸ್ತುಗಳಿಂದ ಮೌಲ್ಯವರ್ಧಿತಗೊಳಿಸಿವ ಪ್ರಾಥಮಿಕ ಉತ್ಪಾದನೆಯನ್ನು ಉದ್ಯಮಕ್ಕೆ ಸರಬರಾಜು ಮಾಡಿದರೆ ಅದನ್ನು ಸೆಕೆಂಡರಿ ಕೃಷಿಗೆ ಪರಿಗಣಿಸಬಹುದಾಗಿದೆ. ಜೇನುಸಾಕಾಣೆ, ಜೈವಿಕ ಗೊಬ್ಬರ ಘಟಕಗಳು, ಸಾವಯವ ಬಣ್ಣ ಅಥವಾ ಡೈ ತಯಾರಿಕೆ, ಅಣಬೆ, ರೇಷ್ಮೆ ಹುಳು ಸಾಕಣೆ, ನರ್ಸರಿ ಇತ್ಯಾದಿಗಳಂತಹ ಸಣ್ಣ ಪ್ರಮಾಣದ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿದೆ.
ಸ್ಥಳೀಯವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಲಭ್ಯವಾಗುವ ಮೂಲ/ಕಚ್ಛಾ ವಸ್ತುಗಳನ್ನು ಮಾನವ ಶಕ್ತಿ, ಕೌಶಲ್ಯಗಳನ್ನು ಮೂಲವಾಗಿ ಸದುಪಯೋಗಪಡಿಸಿಕೊಂಡು ಅಳವಡಿಸುವ ಸಮಗ್ರ ಚಟುವಟಿಕೆಗಳು ಸೆಕೆಂಡರಿ ಕೃಷಿಗೆ ಉತ್ತಮ ಉದಾಹರಣೆಯಾಗಿವೆ. ರೇಸ್ ಕುದುರೆಗಳ ಸಾಕಣೆ, ವನ್ಯಜೀವಿ ಮೀಸಲು ಪ್ರದೇಶಗಳ ಅಭಿವೃದ್ಧಿ, ದೊಡ್ಡ ಔಷಧೀಯ ಮತ್ತು ಕೃಷಿ ರಾಸಾಯನಿಕ ಉದ್ಯಮಗಳು, ದೊಡ್ಡ ಕೃಷಿ ಕೈಗಾರಿಕೆಗಳನ್ನು ಸೆಕೆಂಡರಿ ಅಗ್ರಿಕಲ್ಚರ್ ಎಂದು ಪರಿಗಣಿಸಲಾಗದು ಎಂದು ಹೇಳಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಕೃಷಿ ಮತ್ತು ಇತರ ಜೈವಿಕ ಸಂಪನ್ಮೂಲಗಳ ಪ್ರಾಥಮಿಕ ಉತ್ಪನ್ನ ಮತ್ತು ಉಪಉತ್ಪನ್ನಗಳ ಕಚ್ಚಾ ವಸ್ತುವಾಗಿ ಬಳಸಿಕೊಂಡು ಉತ್ಪಾದಕ ಚಟುವಟಿಕೆ ಮಾಡುವುದು. ಸ್ಥಳೀಯವಾಗಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಕೆಗಾಗೊ ಕೌಶಲ್ಯ ತರಬೇತಿಗಳನ್ನು ನೀಡಿ ಉದ್ಯಮ ಚಟುವಟಿಕೆ ಮಾಡುವುದು.ಎಂ.ಎಸ್.ಎಂ.ಈ.ಡಿ ಕಾಯಿದೆ 2006ರ ಅಡಿಯಲ್ಲಿ ವರ್ಗೀಕರಿಸಲಾದ ಸಣ್ಣ ಅಥವಾ ಮಧ್ಯಮ ಉದ್ಯಮಗಳನ್ನು ಅಭಿವೃದ್ಧಿಪಡಿಸುವುದಾಗಿದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement