ಕರ್ನಾಟಕದಲ್ಲಿ ಗುರುವಾರ ಹೊಸದಾಗಿ 47,754 ಕೊರೊನಾ ಸೋಂಕು ದಾಖಲು..!

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪ್ರಕರಣ 50 ಸಾವಿರದತ್ತ ಮುಖಮಾಡಿದೆ. ಇಂದು ಬರೋಬ್ಬರಿ 47,754 ಹೊಸ ಸೋಂಕು ದಾಖಲಾಗಿದೆ. ಇಂದು ಒಟ್ಟು 29 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ ಹಾಗೂ ಇದೇ ಸಮಯದಲ್ಲಿ ಆಸ್ಪತ್ರೆಯಿಂದ 22,143 ಮಂದಿ ಬಿಡುಗಡೆಯಾಗಿದ್ದಾರೆ. ನಿನ್ನೆ 40,499 ಕೇಸ್ ವರದಿಯಾಗಿತ್ತು. ಬೆಂಗಳೂರಿನಲ್ಲಿ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 30,540 ಸೋಂಕು ವರದಿಯಾಗಿದೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,00,000ಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231ಕ್ಕೆ ತಲುಪಿದೆ. ಪಾಸಿಟಿವಿಟಿ ರೇಟ್ 18.48% ರಷ್ಟಿದ್ದು, ಒಟ್ಟು 2,58,290 ಮಂದಿಗೆ ಪರೀಕ್ಷೆ ಮಾಡಲಾಗಿದೆ.
ರಾಜ್ಯದಲ್ಲಿ ನಿನ್ನೆಗಿಂತ ಇಂದು ಸೋಂಕಿನ ಸಂಖ್ಯೆ ಮತ್ತು ಮರಣ ಪ್ರಮಾಣ ಏರಿಕೆ ಕಂಡಿದ್ದು, ಸಕಾರಾತ್ಮಕ ದರ ಮಾತ್ರ ಅಲ್ಪ ಇಳಿಕೆ ಕಂಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement