ಖ್ಯಾತ ಯಕ್ಷಗಾನ ಕಲಾವಿದ ವಾಮನಕುಮಾರ ನಿಧನ

ಮೂಡಬಿದಿರೆ : ಮೂಡಬಿದಿರೆ ಸಮೀಪದ ಗಂಟಾಲ್ ಕಟ್ಟೆ ಯಲ್ಲಿ ಓಮ್ನಿ ಕಾರು-ಬೈಕ್ ನಡುವಿನ ಡಿಕ್ಕಿ ಸಂಭವಿಸಿ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನಕುಮಾರ್(47) ಇಂದು, ಗುರುವಾರ ಬೆಳಗ್ಗೆ 6:30 ಕ್ಕೆ ನಿಧನರಾಗಿದ್ದಾರೆ.
ಹಿರಿಯಡ್ಕ ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ರಾತ್ರಿ ಬೈಂದೂರು ತಾಲ್ಲೂಕಿನ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ಯಕ್ಷಗಾನ ಮುಗಿಸಿ ಬೆಳಗಿನ ಜಾವ ಮನೆಗೆ ವಾಪಸ್‌ ಬರುತ್ತಿದ್ದಾಗ ಅಪಘಾತದಲ್ಲಿ ನಿಧನರಾಗಿದ್ದಾರೆ.
ಖ್ಯಾತ ಪ್ರಸಂಗಕರ್ತ ಮನೋಹರಕುಮಾರ್ ಅವರಿಂದ ಪ್ರಭಾವಿತರಾಗಿ ಧರ್ಮಸ್ಥಳದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಅವರಿಂದ ಯಕ್ಷಗಾನ ಹೆಜ್ಜೆ ಅಭ್ಯಾಸ ಮಾಡಿದ್ದರು. ಧರ್ಮಸ್ಥಳ ಮೇಳ ದಲ್ಲಿ ಪಯಣ ಆರಂಭಿಸಿದ ಅವರು ಕದ್ರಿ ಮೇಳದಲ್ಲಿ 4 ವರ್ಷ, 15 ವರ್ಷ ಮಂಗಳದೇವಿ ಮೇಳ ಹಾಗೂ ಕಳೆದ 9ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ಪ್ರವೇಶದ ವೇಷಧಾರಿ ಮತ್ತು ಮೇಳದ ಮ್ಯಾನೇಜರಾಗಿ ಸೇವೆ ಸಲ್ಲಿಸುತ್ತಿದ್ದರು. ಇಪ್ಪತ್ತಾರು ವರ್ಷಗಳ ತಿರುಗಾಟ ನಡೆಸಿದ ವಾಮನ್ ಕುಮಾರ್ ಹಾಸ್ಯ, ಸ್ತ್ರೀವೇಷ, ಪುರುಷ ವೇಷ, ಪುಂಡುವೇಷ ಸೇರಿದಂತೆ ಯಾವುದೇ ಪಾತ್ರ ಮಾಡಿ ಗಮನ ಸೆಳೆದು ಯಕ್ಷಗಾನ ರಂಗದಲ್ಲಿ ಖ್ಯಾತಿ ಗಳಿಸಿದ್ದರು.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement