ಪುಷ್ಪ ಸಿನಿಮಾದಿಂದ ಪ್ರೇರಣೆಗೊಂಡ ಅಪ್ರಾಪ್ತರಿಂದ ವ್ಯಕ್ತಿಯ ಕೊಲೆ; ದಿಢೀರ್‌ ಫೇಮಸ್​ ಆಗಲೆಂದು ಹತ್ಯೆ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್…!

ನವದೆಹಲಿ : ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾದ ಬಾಲಕರು ವ್ಯಕ್ತಿಯೊಬ್ಬರನ್ನು ಕೊಲೆಗೈದು , ‘ಪ್ರಸಿದ್ಧರಾಗಲು’ ಕೊಲೆಯ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಬಯಸಿದ್ದ ಕಳವಳಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ವಾಯವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಜಹಾಂಗೀರಪುರಿ ನಿವಾಸಿ 24 ವರ್ಷದ ಶಿಬು ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ವ್ಯಕ್ತಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಬಾಲಕರು ವ್ಯಕ್ತಿಯೊಂದಿಗೆ ಜಗಳವಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ತೆಲುಗಿನ ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾಗಿ ಅಪರಾಧ ಎಸಗಲು ಗ್ಯಾಂಗ್ ರಚಿಸಿದ್ದಾರೆ. ಫೇಮಸ್ ಆಗಲು ಹತ್ಯೆಯ ಅವರು ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಬಯಸಿದ್ದರು
ಹದಿಹರೆಯದವರು ತಮ್ಮನ್ನು ‘ಬದ್ನಾಮ್ ಗ್ಯಾಂಗ್’ ಎಂದು ಕರೆದುಕೊಂಡಿದ್ದಾರೆ ಮತ್ತು ‘ಪುಷ್ಪ’ ಚಿತ್ರದ ಮುಖ್ಯ ಪಾತ್ರದ ನಡವಳಿಕೆಯನ್ನು ಅನುಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಘಟನೆಯ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ನಿರ್ಧರಿಸಿದ್ದರು “ಎಂದು ಡಿಸಿಪಿ (ವಾಯವ್ಯ) ಉಷಾ ರಂಗನಾನಿ ಹೇಳಿದ್ದಾರೆ.
ಬುಧವಾರ, ಬಾಬು ಜಗಜೀವನ್ ರಾಮ್ ಸ್ಮಾರಕ (ಬಿಜೆಆರ್‌ಎಂ) ಆಸ್ಪತ್ರೆಯ ಸಿಬ್ಬಂದಿ ಹೊಟ್ಟೆಯಲ್ಲಿ ಇರಿತದ ಗಾಯಗಳೊಂದಿಗೆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರನ್ನು ಶಿಬು ಎಂದು ಗುರುತಿಸಲಾಗಿದೆ ಮತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಿಬು ಮತ್ತು ಆರೋಪಿಗಳ ನಡುವೆ ಜಗಳ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ಪೋಲೀಸರ ಪ್ರಕಾರ, “ಪುಷ್ಪ” ಮತ್ತು “ಭೌಕಾಲ” ನಂತಹ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ತೋರಿಸಿರುವಂತೆ ದೊಡ್ಡ ದರೋಡೆಕೋರರ ಜೀವನಶೈಲಿಯಿಂದ ಪ್ರಭಾವಿತರಾಗಿದ್ದೇವೆ ಮತ್ತು ಅವುಗಳನ್ನು ನಕಲು ಮಾಡಲು ಬಯಸಿದ್ದೆವು ಎಂದು ಆರೋಪಿಗಳು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement