ಗೋವಾ ಚುನಾವಣೆ: ಸ್ವತಂತ್ರ ಅಭ್ಯರ್ಥಿಯಾಗಿ ಪಣಜಿಯಿಂದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಸ್ಪರ್ಧೆ..!

ಪಣಜಿ: ಗೋವಾ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಮನೋಹರ್ ಪರಿಕ್ಕರ್ ಎರಡು ದಶಕಗಳಿಂದ ಪಣಜಿಯಿಂದ ಸ್ಪರ್ಧಿಸಿದ್ದರು. ಅವರು ಪಣಜಿಯೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡರು ಮತ್ತು ನಾನು ಕೂಡ ಅದನ್ನು ಮಾಡಿದ್ದೇನೆ. ನಾನು ಮೌಲ್ಯಗಳಿಗಾಗಿ ಹೋರಾಡುತ್ತಿದ್ದೇನೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಉತ್ಪಲ್ ಪರಿಕ್ಕರ್ ಹೇಳಿದರು.
ಗುರುವಾರ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಗೋವಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗುಳಿದ ನಂತರ ಉತ್ಪಲ್ ಪರಿಕ್ಕರ್ ಅವರನ್ನು ಎಎಪಿಗೆ ಸೇರಲು ಆಹ್ವಾನಿಸಿದ್ದರು.
ಈ ಕುರಿತು ಉತ್ಪಲ್ ಪರಿಕ್ಕರ್, “ನಾನು ಸ್ಪರ್ಧಿಸಬಹುದೆಂದು ನನ್ನ ಪಕ್ಷಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದೆ, ಆದರೆ ನನಗೆ ಟಿಕೆಟ್‌ ಕೊಡಲಿಲ್ಲ, ನನಗೆ ಎರಡು ಆಯ್ಕೆಗಳಿವೆ – ಬಿಜೆಪಿ ಅಥವಾ ಸ್ವತಂತ್ರವಾಗಿ. ಈಗ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಯ್ಕೆ ಮಾಡಿದ್ದೇನೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ನನಗೆ ಹಲವು ರಾಜಕೀಯ ಪಕ್ಷಗಳು ಆಫರ್ ನೀಡಿವೆ. ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ತಂದೆಯವರೊಂದಿಗೆ ಕೆಲಸ ಮಾಡಿದವರಿಗಾಗಿ ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಫರ್ಧಿಸುತ್ತಿದ್ದೇನೆ. ನನ್ನ ತಂದೆ ಗೋವಾದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾಗ ಗೋವಾದ ಜನರಿಗಾಗಿ ದುಡಿದಿದ್ದರು. ನನ್ನ ತಂದೆಗೂ ಮತ್ತು ರಾಜ್ಯದ ಜನೆತೆಗೂ ಅವಿನಾಭಾವ ಸಂಬಂಧವಿತ್ತು ಎಂದರು.

ಪಣಜಿ ಕ್ಷೇತ್ರದದಿಂದ ಕಳೆದ ಸುಮಾರು 25 ವರ್ಷಗಳಿಂದ ಮನೋಹರ್ ಪರ್ರಿಕರ್ ಸ್ಫರ್ಧಿಸಿ ಸತತ ಜಯಗಳಿಸಿದ್ದರು. ಈ ಕ್ಷೇತ್ರದಿಂದ ಪ್ರಸಕ್ತ ಚುನಾವಣೆಯಲ್ಲಿ ಉತ್ಪಲ್ ಪರೀಕರ್ ಬಿಜೆಪಿಯಿಂದ ಸ್ಫರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ ಬಿಜೆಪಿಯು ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ ರವರಿಗೆ ಟಿಕೆಟ್ ನೀಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement