ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ಸರ್ಕಾರದ ಗೌರವ – ಇಂಡಿಯಾ ಗೇಟ್‌ನಲ್ಲಿ ಭವ್ಯವಾದ ಗ್ರಾನೈಟ್ ಪ್ರತಿಮೆ ಸ್ಥಾಪನೆ- ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.
ನೇತಾಜಿಯವರ ಭವ್ಯ ಪ್ರತಿಮೆ ಪೂರ್ಣಗೊಳ್ಳುವವರೆಗೆ, ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಬಳಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನೇತಾಜಿಯವರ 125ನೇ ಜನ್ಮದಿನವಾದ ಜನವರಿ 23, 2022 ರಂದು ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆ ಅನಾವರಣಗೊಳಿಸುವುದಾಗಿ ಪ್ರಧಾನಿ ಹೇಳಿದರು.
ಇಡೀ ರಾಷ್ಟ್ರವು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುತ್ತಿರುವ ಈ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಲ್ಪಟ್ಟ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲು ನನಗೆ ಸಂತೋಷವಾಗಿದೆ. ಇದು ಭಾರತದ ಋಣಿಯ ಸಂಕೇತವಾಗಿದೆ. ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನೇತಾಜಿ ಅವರ ಪ್ರತಿಮೆಯ ಆಯಾಮಗಳು 28 ಅಡಿ X 6 ಅಡಿಗಳು ಬೃಹತ್‌ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಸ್ಪಾಪಿಸಲಾಗುತ್ತದೆ.
ಬಿಜೆಪಿ ನಾಯಕ ಮತ್ತು ನೇತಾಜಿ ಅವರ ಬಂಧು ಚಂದ್ರ ಕುಮಾರ್ ಬೋಸ್ ಅವರು ಜನವರಿ 23 ರಂದು ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸುವ ಪ್ರಧಾನಿ ಮೋದಿಯವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನಿವೃತ್ತ ಮೇಜರ್ ಜನರಲ್ ಜಿಡಿ ಬಕ್ಷಿ ಕೂಡ ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ದಶಕಗಳಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪರಂಪರೆಯನ್ನು ಈ ದೇಶದಲ್ಲಿ ಕಡೆಗಣಿಸಲಾಗಿದೆ ಎಂದು ಹೇಳಿದರು.
ಏತನ್ಮಧ್ಯೆ, ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಪ್ರಧಾನಿ ಮೋದಿಯವರ ಘೋಷಣೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದ್ದಾರೆ.
ನೇತಾಜಿ ಅವರು ಭಾರತದ ನಿಜವಾದ ಶಕ್ತಿ ಮತ್ತು ಸಂಕಲ್ಪದ ಸಾರಾಂಶ. ಅವರ 125 ನೇ ಜಯಂತಿಯಂದು ನೇತಾಜಿ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲು ಪ್ರಧಾನಿ ಅವರ ನಿರ್ಧಾರವು ನಮ್ಮ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ” ಎಂದು ಶಾ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement