ಮುಂಬೈ: 20 ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಜನರು ಸಾವು, 15 ಜನರಿಗೆ ಗಾಯ

ಮುಂಬೈ: ಮುಂಬೈನ ಭಾಟಿಯಾ ಆಸ್ಪತ್ರೆ ಸಮೀಪದ ಟಾರ್ಡಿಯೊ ಪ್ರದೇಶದಲ್ಲಿ ಶನಿವಾರ (ಜನವರಿ 22) ಬೆಳಿಗ್ಗೆ ಸಂಭವಿಸಿದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 15 ಜನರು ಗಾಯಗೊಂಡಿದ್ದಾರೆ.
ಭಾಟಿಯಾ ಆಸ್ಪತ್ರೆ ಸಮೀಪ ಇರುವ 20 ಮಹಡಿಯ ಕಮಲಾ ಬಿಲ್ಡಿಂಗ್ ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.
ಅಗ್ನಿ ಅನಾಹುತದದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳದಲ್ಲಿ ಐದು ಆಯಂಬುಲೆನ್ಸ್ ಗಳಿದ್ದು, ಜನರನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ. ಬೆಂಕಿ ನಂದಿಸಲು ಒಟ್ಟು 13 ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಬಹುಮಹಡಿ ಕಟ್ಟಡದ 18ನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಿವಾಸಿಗಳು ಭೀತಿಗೊಳಗಾಗಿದ್ದು, ದಟ್ಟವಾದ ಹೊಗೆಯಿಂದಾಗಿ ಆರು ಮಂದಿ ವೃದ್ಧರಿಗೆ ತೊಂದರೆಯಾಗಿದ್ದು, ಆಕ್ಸಿಜನ್ ನೀಡಲಾಗಿದೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡದಲ್ಲಿ ಬೆಂಕಿ ಯಾವ ಕಾರಣದಿಂದ ಹೊತ್ತಿಕೊಂಡಿದೆ ಎಂಬುದು ತನಿಖೆಯಿಂದ ಎಂದು ಮೇಯರ್ ತಿಳಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿರುವುದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement