ಹಾವೇರಿ: ಹಿರಿಯ ಪತ್ರಕರ್ತ ಜಿ.ಎಂ.ಕುಲಕರ್ಣಿ ನಿಧನ

posted in: ರಾಜ್ಯ | 1

ಹಾವೇರಿ: ಕವಿ ಹಾಗೂ ಪತ್ರಕರ್ತ, ನಗರದ ಜಿ.ಎಂ.ಕುಲಕರ್ಣಿ(58) ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನವಾಗಿದ್ದಾರೆ.
ಕುಲಕರ್ಣಿ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ತಮ್ಮ ಸಿಂಚನ ಪ್ರಕಾಶನದ ಮೂಲಕ ಅನೇಕ ಲೇಖಕರ ಪುಸ್ತಕ ಪ್ರಕಟಿಸಿದ್ದಾರೆ. ಅಲ್ಲದೆ, ಅವರು ‘ಕತ್ತಲಲ್ಲಿ ಕಾಲಿ ತಟ್ಟೆ ಹಿಡಿದವರು’ ಎಂಬ ಕವನ ಸಂಕಲನ ಹೊರತಂದಿದ್ದರು. ಮಾಧ್ಯಮ ಲೋಕದಲ್ಲಿ ಜಿ.ಎಂ.ಕುಲಕರ್ಣಿ ಹೆಸರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಚಲಿತದಲ್ಲಿತ್ತು.
ಕುಲಕರ್ಣಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಪತ್ರಕರ್ತರ ಬಳಗದವರು ಸಂತಾಪ ಸೂಚಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ, ಡಿಕೆಶಿ ಸೇರಿ 29 ನಾಯಕರಿಗೆ ಕೋರ್ಟ್​ ಸಮನ್ಸ್
advertisement

  1. Arunkumar Habbu

    ಜಿ ಎಂ ಕುಲಕರ್ಣಿ ನನ್ನ ಸ್ನೇಹಿತರೂ ಆಗಿದ್ದರು. ಅವರ ನಿಧನ ನನಗೆ ತೀವ್ರ ಆಘಾತ ತಂದಿದೆ. ಅವರಿಗೆ ಗೌರವ ನಮನಗಳು

ನಿಮ್ಮ ಕಾಮೆಂಟ್ ಬರೆಯಿರಿ