ಬೆಂಗಳೂರು: ಕರ್ನಾಟಕದಲ್ಲಿ ಇಂದು, ಭಾನುವಾರ ಹೊಸ ಪ್ರಕರಣ ಅರ್ಧ ಲಕ್ಷ ದಾಟಿದೆ..! ಕಳೆದ 24 ಗಂಟೆಯಲ್ಲಿ ಹೊಸದಾಗಿ 50,210 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವಿಟ್ಟರಿನಲ್ಲಿ ಮಾಹಿತಿ ಹಂಚಿಕಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರು, ಕಳೆದ 24 ಗಂಟೆಯಲ್ಲಿ ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 8 ಮಂದಿ ಸೇರಿದಂತೆ ಕರ್ನಾಟಕದಲ್ಲಿ 19 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 2,20,459 ಮಂದಿಗೆ ಕೊರೋನಾ ಪರೀಕ್ಷೆ ( Covid-19 Test ) ಮಾಡಲಾಗಿದೆ. ಇವರಲ್ಲಿ ಬೆಂಗಳೂರಿನ 26,299 ಸೇರಿದಂತೆ ರಾಜ್ಯಾದತ 50,210 ಜನರಿಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಪಾಸಿಟಿವಿಟಿ ದರ ಶೇ.22.77ಕ್ಕೆ ಏರಿಕೆಯಾಗಿದೆ. ಇದೇವೇಳೆ 22,842 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 2.31 ಲಕ್ಷ ಸೇರಿದಂತೆ ರಾಜ್ಯದಲ್ಲಿ 3,57,796 ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾವಾರು ಮಾಹಿತಿ..
ಬೆಂಗಳೂರು ನಗರ 26,299, ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1922, ಹಾವೇರಿ 165, ಕಲಬುರ್ಗಿ 853, ಕೊಡಗು 1139, ಕೋಲಾರ 824, ಕೊಪ್ಪಳ 510, ಮಂಡ್ಯ 1455, ಮೈಸೂರು 4539, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1963, ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249, ಯಾದಗಿರಿ 151.
ನಿಮ್ಮ ಕಾಮೆಂಟ್ ಬರೆಯಿರಿ