ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಿಸಿ ಆದೇಶ: ಸಂಪೂರ್ಣ ವಿವರ ಇಲ್ಲಿದೆ..

ಬೆಂಗಳೂರು: ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 28 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ.
ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಪಟ್ಟಿ ಇಂತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಕಾರಜೋಳ – ಬೆಳಗಾವಿ
ಕೆ. ಎಸ್. ಈಶ್ವರಪ್ಪ – ಚಿಕ್ಕಮಗಳೂರು
ಬಿ. ಶ್ರೀರಾಮುಲು – ಬಳ್ಳಾರಿ
ವಿ.ಸೋಮಣ್ಣ – ಚಾಮರಾಜನಗರ
ಉಮೇಶ ಕತ್ತಿ – ವಿಜಯಪುರ
ಎಸ್. ಅಂಗಾರ – ಉಡುಪಿ
ಅರಗ ಜ್ಞಾನೇಂದ್ರ – ತುಮಕೂರು
ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ
ಸಿ.ಸಿ.ಪಾಟೀಲ – ಬಾಗಲಕೋಟೆ
ಆನಂದ ಸಿಂಗ್ – ಕೊಪ್ಪಳ
ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ – ಯಾದಗಿರಿ
ಮುರುಗೇಶ್ ನಿರಾಣಿ – ಕಲಬುರ್ಗಿ
ಶಿವರಾಂ ಹೆಬ್ಬಾರ – ಹಾವೇರಿ
ಎಸ್. ಟಿ. ಸೋಮಶೇಖರ್ – ಮೈಸೂರು
ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ
ಬೈರತಿ ಬಸವರಾಜ – ದಾವಣಗೆರೆ
ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗಾರಾಜ – ಚಿಕ್ಕಬಳ್ಳಾಪುರ
ಕೆ. ಸಿ. ನಾರಾಯಣಗೌಡ – ಶಿವಮೊಗ್ಗ
ಬಿ.ಸಿ.ನಾಗೇಶ – ಕೊಡಗು
ವಿ.ಸುನೀಲಕುಮಾರ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ – ಧಾರವಾಡ
ಶಂಕರ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ
ಮುನಿರತ್ನ – ಕೋಲಾರ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement