ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ 46,426 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ 41,703 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಹಾಗೂ 32 ಜನರು ಮೃತಪಟ್ಟಿದ್ದಾರೆ.
ಪ್ರಸ್ತುತ 3,62,487 ಸಕ್ರಿಯ ಪ್ರಕರಣಗಳಿವೆ. ಪ್ರಸ್ತುತ ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 32.95 ಇದ್ದು, ಸೋಂಕಿತರ ಸಾವಿನ ಸರಾಸರಿ ಶೇ 0.06 ಇದೆ.
ಬೆಂಗಳೂರು ನಗರದಲ್ಲಿ ಸೋಮವಾರ ಒಟ್ಟು 21,569 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 27,008 ಜನರು ಚೇತರಿಸಿಕೊಂಡಿದ್ದಾರೆ. ಒಂಬತ್ತು ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಪ್ರಸ್ತುತ 2,26,385 ಸಕ್ರಿಯ ಸೋಂಕು ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿನ ಮಾಹಿತಿ:
ಬೆಂಗಳೂರು ನಗರ 21,569, ಬೆಂಗಳೂರು ಗ್ರಾಮಾಂತರ 1607, ಬಾಗಲಕೋಟೆ 291, ಬಳ್ಳಾರಿ 817, ಬೆಳಗಾವಿ 625, ಬೀದರ್ 284, ಚಾಮರಾಜನಗರ 656, ಚಿಕ್ಕಬಳ್ಳಾಪುರ 905, ಚಿಕ್ಕಮಗಳೂರು 144, ಚಿತ್ರದುರ್ಗ 642, ದಕ್ಷಿಣ ಕನ್ನಡ 655, ದಾವಣಗೆರೆ 467, ಧಾರವಾಡ 1407, ಗದಗ 257, ಹಾಸನ 1908, ಹಾವೇರಿ 304, ಕಲಬುರ್ಗಿ 379, ಕೊಡಗು 657, ಕೋಲಾರ 661, ಕೊಪ್ಪಳ 525, ಮಂಡ್ಯ 1837, ಮೈಸೂರು 4105, ರಾಯಚೂರು 281, ರಾಮನಗರ 288, ಶಿವಮೊಗ್ಗ 537, ತುಮಕೂರು 2960, ಉಡುಪಿ 677, ಉತ್ತರ ಕನ್ನಡ 626, ವಿಜಯಪುರ 270, ಯಾದಗಿರಿ 85.
ಬೆಂಗಳೂರು ನಗರ 9, ಮೈಸೂರು, ದಕ್ಷಿಣ ಕನ್ನಡ, ಉಡುಪಿ 3, ಹಾವೇರಿ, ಕಲಬುರ್ಗಿ 2, ಹಾಸನ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಗದಗ, ಬೆಳಗಾವಿ 1 ಮೃತಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ