ಮುದ್ದಿನ ನಾಯಿಮರಿಗಳ ಕಾಪಾಡಲು ಬಲಶಾಲಿ ಕರಡಿ ಜೊತೆ ಸೆಣಸಿದ ವ್ಯಕ್ತಿ…! ದೃಶ್ಯ ವಿಡಿಯೊದಲ್ಲಿ ಸೆರೆ

ಅಮೆರಿಕದ ಫ್ಲೋರಿಡಾದಲ್ಲಿ ಈ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರ ಮನೆಯೊಳಗಿದ್ದ ಶ್ವಾನಗಳ ಮೇಲೆ ದಾಳಿ ಮಾಡುವ ಸಲುವಾಗಿಯೇ ಈ ಕರಡಿ ಮನೆಯೊಳಗೆ ಪ್ರವೇಶಿಸುವ ಪ್ರಯತ್ನ ಮಾಡಿತ್ತು. ಇದನ್ನು ಕಂಡ ಮನೆ ಮಾಲಿಕರು ಕರಡಿ ಮನೆಯೊಳಗೆ ಪ್ರವೇಶಿಸಿದಂತೆ ತಡೆದಿದ್ದರು. ಅಲ್ಲದೆ ತನ್ನ ನಾಯಿ ಮರಿಗಳ ರಕ್ಷಣೆಗೆ ಬಲಶಾಲಿ ಕರಡಿ ಜೊತೆ ಹೋರಾಡಿದ್ದಾರೆ. ಜಗಜಟ್ಟಿಯಂತೆ ನಿಂತು ಕರಡಿಯನ್ನು ಮಲ್ಲಯುದ್ಧದಲ್ಲಿ ದೂಡಿದ್ದಾರೆ. ಅವರು ದೂಡಿದ ರಭಸಕ್ಕೆ ಕರಿಡ ಹಿಂದೆ ಹೋಗಿದೆ. ಶ್ವಾನಗಳಿಗಾಗಿ ಅಪಾಯಕಾರಿ ಕರಡಿಯನ್ನು ಎದುರಿಸುವ ಈ ಮಾಲೀಕರು ನಂತರ ಈ ಕರಡಿ ಒಳಗೆ ಪ್ರವೇಶಿಸದಂತೆ ದೊಡ್ಡ ಬೆಂಚ್‌ ಒಂದನ್ನು ಬಾಗಿಲಿಗೆ ಅಡ್ಡವಾಗಿ ಇಡುತ್ತಾರೆ.
ವಾಲ್ಟರ್ ಹಿಕಾಕ್ಸ್‌ ಇಲ್ಲಿ ಧೈರ್ಯ ತೋರಿದ ವ್ಯಕ್ತಿ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದ್ದು, ಎಲ್ಲರೂ ಈ ವ್ಯಕ್ತಿಯ ಧೈರ್ಯ ಮತ್ತು ಪ್ರಾಣಿ ಪ್ರೀತಿಯನ್ನು ಕೊಂಡಾಡಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement